ಎಲ್ಲಿ ಕೂತಿರುವೆ ನನ್ನೊಡತಿ
ಎಲ್ಲಿ ಕೂತಿರುವೆ
ನನಗೆ ಪ್ರೀತಿಯ ಕಲಿಸಿ.
ಎಲ್ಲಿ ನಗುತಿರುವೆ
ಸ್ನೇಹದ ಗೆರೆ ದಾಟಿ .
ನಗುವಾಗಲಿ ಅಳುವಾಗಲಿ
ಕೈ ಹಿಡಿದು ನನ್ನ ನಡೆಸಿದೆ ಓ ದೇವತೆ.
ಕನಸೆನ್ನುವುದು ಏನೆಂದು
ತಿಳಿಗೊಡಿಸಿದ ಆ ತನ್ಮಯತೆ.
ಮಲೆನಾಡಿನ ತಂಗಾಳಿಗೆ
ನೀ ಸೆಳೆದಾಗ ಬಂದ ಬಿಸಿ ಗಾಳಿಯು,.
ಕಣ್ಮುಚ್ಚಿ ನೆನೆದಾಗ
ಬಂದ ಬಿಗಿದಪ್ಪುಗೆಯು.
'
ಮರವಂತೆಯ ಅಲೆದಾಡುತ
ಸೂರ್ಯನ ಚಂದ್ರನ ಕಿರಣಕೆ
ಮೈ ಸೋಕಿದಾಗ ತಂದ ತಿಳಿ ಆಸೆಗೆ
ಎಳೆನೀರಿನ ತಿಳಿ ಲೇಪವು.
ನೀ ಓಡಿಸಿದ ಗಾಡಿಯ ವೇಗಕೆ
ಹೆದರಾದರೂ ಹಿಡಿದ ಬಿಗಿದಪ್ಪುಗೆಯ
ನೋಡಲೆಂದೇ ಬಂದ ನವೀಲಿನ
ಬಣ್ಣದ ನೋಟವು , ಸುಗ್ಗಿ ಸುಗ್ಗಿ ನೃತ್ಯವು
ಹಿಂದೆ ಹಿಂದೆ ಹೋದ ಸಾಲು ಮರಗಳು
ಇಣುಕಿ ಇಣುಕಿ ನೋಡಲೆಂದು
ಕನ್ನಡಿಯಲಿ ಕಂಡ ನಿನ್ನ ಮುಗುಳುನಗೆಯು
ಅದನ್ನು ಕಂಡು ಹಿಗ್ಗಿದ ಅಂಕು ಡೊಂಕು ಮರಗಳು
ಜಲಪಾತದಲ್ಲಿ ನಡೆದಾಡಿದ
ನಿನ್ನ ಆ ಮೈಮಾಟವು
ರತಿಯನ್ನೆ ನಾಚಿಸಿದ್ದು .
ಮನ್ಮಥನ ರಂಜಿಸಿದ್ದು .
ಮೋಡದ ಮರೆಯಲಿ
ಮಗುವನ್ನು ಕುಣಿಸಲು
ನೀ ಮಾಡಿದ ನೃತ್ಯಕೆ
ವರುಣನೇ ಮಳೆಗೆರೆದಿದ್ದು
ಎಲ್ಲಿ ಕೂತಿರುವೆ
ನನ್ನ ಪ್ರೀತಿಯ ಓ ಗೆಳತೀ
ನನ್ನ ಹೃಯದ ಪ್ರಣಯಕ್ಕೆ
ನೀ ಒಡತಿ .. ನನ್ನೊಡತಿ .
ನನಗೆ ಪ್ರೀತಿಯ ಕಲಿಸಿ.
ಎಲ್ಲಿ ನಗುತಿರುವೆ
ಸ್ನೇಹದ ಗೆರೆ ದಾಟಿ .
ನಗುವಾಗಲಿ ಅಳುವಾಗಲಿ
ಕೈ ಹಿಡಿದು ನನ್ನ ನಡೆಸಿದೆ ಓ ದೇವತೆ.
ಕನಸೆನ್ನುವುದು ಏನೆಂದು
ತಿಳಿಗೊಡಿಸಿದ ಆ ತನ್ಮಯತೆ.
ಮಲೆನಾಡಿನ ತಂಗಾಳಿಗೆ
ನೀ ಸೆಳೆದಾಗ ಬಂದ ಬಿಸಿ ಗಾಳಿಯು,.
ಕಣ್ಮುಚ್ಚಿ ನೆನೆದಾಗ
ಬಂದ ಬಿಗಿದಪ್ಪುಗೆಯು.
'
ಮರವಂತೆಯ ಅಲೆದಾಡುತ
ಸೂರ್ಯನ ಚಂದ್ರನ ಕಿರಣಕೆ
ಮೈ ಸೋಕಿದಾಗ ತಂದ ತಿಳಿ ಆಸೆಗೆ
ಎಳೆನೀರಿನ ತಿಳಿ ಲೇಪವು.
ನೀ ಓಡಿಸಿದ ಗಾಡಿಯ ವೇಗಕೆ
ಹೆದರಾದರೂ ಹಿಡಿದ ಬಿಗಿದಪ್ಪುಗೆಯ
ನೋಡಲೆಂದೇ ಬಂದ ನವೀಲಿನ
ಬಣ್ಣದ ನೋಟವು , ಸುಗ್ಗಿ ಸುಗ್ಗಿ ನೃತ್ಯವು
ಹಿಂದೆ ಹಿಂದೆ ಹೋದ ಸಾಲು ಮರಗಳು
ಇಣುಕಿ ಇಣುಕಿ ನೋಡಲೆಂದು
ಕನ್ನಡಿಯಲಿ ಕಂಡ ನಿನ್ನ ಮುಗುಳುನಗೆಯು
ಅದನ್ನು ಕಂಡು ಹಿಗ್ಗಿದ ಅಂಕು ಡೊಂಕು ಮರಗಳು
ಜಲಪಾತದಲ್ಲಿ ನಡೆದಾಡಿದ
ನಿನ್ನ ಆ ಮೈಮಾಟವು
ರತಿಯನ್ನೆ ನಾಚಿಸಿದ್ದು .
ಮನ್ಮಥನ ರಂಜಿಸಿದ್ದು .
ಮೋಡದ ಮರೆಯಲಿ
ಮಗುವನ್ನು ಕುಣಿಸಲು
ನೀ ಮಾಡಿದ ನೃತ್ಯಕೆ
ವರುಣನೇ ಮಳೆಗೆರೆದಿದ್ದು
ಎಲ್ಲಿ ಕೂತಿರುವೆ
ನನ್ನ ಪ್ರೀತಿಯ ಓ ಗೆಳತೀ
ನನ್ನ ಹೃಯದ ಪ್ರಣಯಕ್ಕೆ
ನೀ ಒಡತಿ .. ನನ್ನೊಡತಿ .