ಕವಿಯು ನಾನಲ್ಲ

8:41 AM 0 Comments A+ a-

This poem I wrote after reading mysooru mallige of KSN. I felt calling myself as a poet is like showing disrespect to legendary poets like KSN who is regarded as father of kannada romantic poetry. His imagination and romantic words can attract any one. Really he has become source of inspiration for improving myself and go ahead with my journey of imagination.

ಕವಿಯು ನಾನಲ್ಲ
ಕವಿಯ ಜ್ಞಾನವು ನನ್ನಲಿಲ್ಲ,
ನಿನ್ನ ಪೂಜಿಸಿ ಮುಂದೆ ಸಾಗಿಹೆನು
ಮುಂದೆ ಸಿಗುವುದೆಲ್ಲ ನನ್ನದಲ್ಲ.

ಕೈಯ ಕಟ್ಟಿ ಸುಮ್ಮನೆ ಕುಳಿತಿರಲು
ನನ್ನ ಬಳಿ ಆಗುವುದಿಲ್ಲ
ಪದಗಳ ಜೋಡಣೆ ಇಲ್ಲದೆ
ನನಗೆ ಮೋಕ್ಷವಿಲ್ಲ.

ಮೈಸೂರು ಮಲ್ಲಿಗೆಯ ಕಂಪು
ನನ್ನ ಪದಗಳಲ್ಲಿಲ್ಲ,
ಕಾರಣವೇನು ಕೇಳದಿರು
ನನ್ನ ಬಳಿ ಉತ್ತರವಿಲ್ಲ.

ಕವಿ ಎಂದು ನನ್ನ ನಾ ಬಣ್ಣಿಸಿದರೆ
ನಿನ್ನ ನಾ ಕರೆಯಲೇನು?
ನೀ ನನ್ನ ಕೈ ಹಿಡಿಯದಿರೆ
ನನ್ನ ಬಾಳಿಗೆ ಅರ್ಥವೇನು?

ಮಲ್ಲಿಗೆಯ ರಾಯರಂತೆ
ಮುನಿಯದಿರು ನನ್ನ ಪದಗಳ ಮುಂದೆ
ಮನ್ನಿಸು ತಂದೆ ಈ ಬಾಲಕನ
ಕರೆಯಲಾರೆ ನನ್ನ ಕವಿ ಎಂದು ನಿನ್ನ ಮುಂದೆ.