ಕ್ಷಮಿಸು ನೀ ನನ್ನ

9:16 AM 1 Comments A+ a-

ಪ್ರೀತಿ  ಅರಿವಿಲ್ಲದೆ  ಮೂಡಿದೆ
ಕ್ಷಮಿಸು  ನೀ  ನನ್ನ 
ತಡೆದು  ತಡೆದು  ಸೋತು
ಸ್ಪೋಟಗೊಂಡಿದೆ  ಹೃದಯದಿಂದ  ನನ್ನ


ಮೊದಲ  ನೋಟದಲ್ಲೇ  ಮಾರು  ಹೋಗಿದ್ದೆ
ನಿನ್ನ  ಕಣ್ಣ  ನೋಡಿದಾಗ 
ಮೊದಲ  ಸಾರಿ  ಜಾರಿ  ಬಿದ್ದಿದ್ದೆ
ನಿನ್ನ  ನಗುವ   ನೋಡಿದಾಗ


ಸ್ನೇಹವ  ಕಳೆದು  ಕೊಳ್ಳುವೆ
ಎನ್ನುವ  ಬಯದಲ್ಲೇ  ಬದುಕಿದೆ
ಪ್ರೀತಿಯ  ತಿಳಿಸಲಾರದೆ
ಅದುಮಿಟ್ಟಿದ್ದೆ ಮನದಾಳದ  ಹನಿಗವನಗಳನ್ನೆಲ್ಲ


ಸುಳ್ಳು  ಕಥೆಗಳನ್ನೆಲ್ಲಾ  ಹೇಳಿ
ನನ್ನ  ಪ್ರೀತಿ  ತಡೆದುಕೊಳ್ಳಲು
ಮಾಡಿದ  ಪ್ರಯತ್ನವೆಲ್ಲ
ಬರಿ  ಹೋಮಕ್ಕೆ  ಹಾಕಲು


ನಿನ್ನ  ನಗುವ   ನೋಡೇ
ನಾ  ಜಯಿಸಬೇಕೆಂಬ  ಅರಿವಲ್ಲೋ
ನಿನ್ನ  ದಣಿವನ್ನಾರಿಸಲು
ಹಾಸ್ಯ  ಪಟಾಕಿಯಾಗುವ  ಬಯಕೆಯಲ್ಲೋ 


ನಿನ್ನ  ಯಶದಲ್ಲಾಗುವ
ವ್ಯಕ್ತಪಡಿಸದ  ಉಲ್ಲಾಸದಲ್ಲೋ
ನಿನ್ನ  ಸೋಲಿನಲ್ಲಿ   
ಕಳೆದುಕೊಳ್ಳುವ  ಆತ್ಮ  ಸ್ತೈರ್ಯದಲ್ಲೋ


ಕೊನೆಗೊಳ್ಳದ  ಕಥೆಯಾಗಿದೆ 
ಕ್ಷಮಿಸು  ನೀ  ನನ್ನ
ಮರೆಯಲಾರದ  ಅನುಬವ  ನೀಡಿರುವೆ
ಮರೆಯಲಿ  ಹೇಗೆ  ನಿನ್ನ

1 comments:

Write comments
srikant
AUTHOR
March 4, 2012 at 10:08 PM delete

love is like a "seconds"so when this second pass never comes again

Reply
avatar