ನಿನ್ನ ಮಧುರ ಸ್ಪರ್ಶವನ್ನು ಮರೆಯುವುದಾದರೂ ಹೇಗೆ ?
It may look like romantic poem. But this poem I wrote on fathers day dedicating to all fathers.A man loves his wife more than anything. He looses her in a operation while she is giving birth to a daughter. In such a situation he looses all his desire to live. He thinks for whom he has to live. In such a situation a beautiful touch from a baby stops him. He reinvent himself.After 20 years when his daughter has left his home to enter a new life, alone in his home turns his pages of life.ನಿನ್ನ ಮಧುರ ಸ್ಪರ್ಶವನ್ನು
ಮರೆಯುವುದಾದರೂ ಹೇಗೆ ?
ಮನದಾಳದಿಂದ ಉಕ್ಕಿ ಹರಿದು ಬಂದ
ಕಣ್ಣಿರಿನ ಹನಿಗಳು
ಜೀವನಕ್ಕೆ ಸ್ಪೂರ್ತಿಯಂತಿದ್ದ
ಅವಳ ಮಧುರ ನೆನಪುಗಳು
ಮಡದಿಯ ಕಳೆದುಕೊಂಡು ಭಾವನಾಡಿಯಿಂದ
ಬಂದಂತಹ ದುಃಖದ ಬಗೆಗಳು
ಎಲ್ಲವೂ ಮರೆತು ಹೊಸ
ಜೀವನಕ್ಕೆ ಕರೆಕೊಟ್ಟ
ನಿನ್ನ ಮಧುರ ಸ್ಪರ್ಶವನ್ನು
ಮರೆಯುವುದಾದರೂ ಹೇಗೆ?
ತಾಯಿ ಇಲ್ಲದ ತಬ್ಬಲಿ ನೀನು
ತಾಯಿಯ ಕೊರತೆ ಇಲ್ಲದೆ ಬೆಳೆಸಿದೆ ನಾನು,
ಉಪ್ಪಿನ ಮೂಟೆ ಹೊತ್ತದ್ದು ನಾನು
ನಿನ್ನ ಆಟಕ್ಕೆ ಅಶ್ವವಾದದ್ದು ನಾನು,
ಬೆಳೆಗಿನಿಂದ ಸಂಜೆಯವರೆಗೆ
ಆಟದ ಗೊಂಬೆಯಾದದ್ದು ನಾನು,
ನಿನ್ನ ನಗುವಿನಲ್ಲಿ ಮೈಮರೆತಿದ್ದು ನಾನು,
ಅವಳ ಕಳೆದುಕೊಂಡು ದುಃಖದ ಮದುವಿನಲ್ಲಿದ್ದ ನನಗೆ
ಸಂಜೀವಿನಿಯಾಗಿದ್ದು ನೀನು
ಹೀಗಿರುವಾಗ,
ನಿನ್ನ ಮಧುರ ಸ್ಪರ್ಶವನ್ನು
ಮರೆಯುವುದಾದರೂ ಹೇಗೆ?
ಕಾಲೇಜಿನಲ್ಲಿ ನೀನು ಪ್ರೀತಿಸಿದ ಹುಡುಗನಲ್ಲಿ
ನಿನ್ನ ಮಧುವೆ ಮಾಡಿಸಿದ್ದು ನಾನೇ,
ನಿನ್ನ ವಿರಹ ತಾಳಲಾರದೆ ಈಗ
ಚದಪದಿಸುತ್ತಿರುವುದೂ ನಾನೇ,
ನೀನೆ ಪ್ರಪಂಚವಾಗಿದ್ದ ನನಗೆ
ಬದುಕು ಶೂನ್ಯವಾಗುತ್ತಿದೆ ಈ ಬಗೆ
ಸಾವಿರಲಿ ಬದುಕಿರಲಿ
ಈ ಜೀವನಕ್ಕೆ ಅರ್ಥ ಕಲ್ಪಿಸಿಕೊಟ್ಟ
ನಿನ್ನ ಮಧುರ ಸ್ಪರ್ಶವನ್ನು
ಮರೆಯುವುದಾದರೂ ಹೇಗೆ?
4 comments
Write commentsIt is a bouncer 4 me
Replywhat a beautiful approach...
ReplyI am really happy to see this.
Dear BJ, you have an excellent word and concept with inside.
I want this journey to continue to new heights....
ya ketan sorry... if i get time ill translate this to english and send u......
ReplyExcellent le BJ......Keep it up.....keep me updated when you wright new poem.....
ReplyThanks.