ಪ್ರೀತಿ ಎಂಬ ಬೆಳಕು
ನೀ ಬಾನೆತ್ತರಕ್ಕೆ ಹಾರಿದಾಗ
ಭುವಿಯುದ್ದಕ್ಕೂ ಬೀಸಿದಾಗ
ಮನಸ್ಸಿನೆತ್ತರಕ್ಕೂ ಮುಟ್ಟಿದಾಗ
ಶಾಂತಿ ಎಂಬ ಸೂತ್ರವು ಉದ್ದಗಲಕ್ಕೂ ಹರಡಿತು.
ನಿನ್ನ ಕಣ್ಣುಗಳಲ್ಲಿ ಕಾಣುವ ಆ ರಮ್ಯತೆಯು
ನನ್ನ ಮನಸ್ಸಲಿ ತೇಲಾಡುವಂತೆ ಮಾಡಿದೆ ತನ್ಮಯತೆಯನು.
ನಿನ್ನ ನಗುವ ಕಂಡಾಗ ಮೈಮರೆಯುವೆನು
ಕನಸುಗಳ ಗೋಪುರಕ್ಕೆ ನಾಂದಿ ಹಾಡುವೆನು.
ನಿನ್ನ ಮರೆಯಬೇಕೆಂದು ಕಣ್ಣ ಮುಚ್ಚುವೆನು.
ಮನಸ್ಸು ತುಂಬಾ ನಿನ್ನ ಚೆಲುವನ್ನೇ ಕಾಣುವೆನು.
ಕಣ್ಣು ತೆರೆದರೂ ನಿನ್ನ ಕಾಣುವೆನು.
ಕಾಣದಿದ್ದಾಗ ನಿನ್ನ ನೋಡಲು ಹಂಬಲಿಸುವೆನು.
ನನ್ನ ಕೆಲಸಕ್ಕೆ ನೀನೇ ಸ್ಪೂರ್ತಿಯು
ನನ್ನ ಮನಸ್ಸಿಗೆ ನೀನೇ ತೃಪ್ತಿಯು
ನನ್ನ ಯಶಸ್ಸಿಗೆ ನೀನೇ ಕೀರ್ತಿಯು
ಅದುವೇ ಜಗದ ನಡುವಿನ ನನ್ನ ನಿನ್ನ ಪ್ರೀತಿಯು.
- ಅಲೆಮಾರಿ ಕವಿ
It was early in my college days—perhaps the very first day, or maybe a few weeks in—when I first saw her by the notice board, wearing white. That image stuck with me, only to be followed by the memory of her singing a patriotic song in the crowded auditorium. When fortune made us classmates the next year, she became the ultimate muse for my writing. I had tried my hand at poetry before, but she was the first to inspire verses that actually touched my soul.
