ನೀನಿಲ್ಲದೆ ಸವಿಯುವ ಕಲ್ಪನೆಯಾದರೂ ಏಕೆ?

12:04 PM 0 Comments A+ a-

ನಾ ತಣ್ಣಗಿನ ತಂಗಾಳಿಯಲ್ಲಿ
ಮೈ ಮರೆತು ಕುಳಿತಿರುವಾಗ
ನೀ ಮೈ ಕೊರೆಯುವ ಚಳಿಯಲ್ಲಿ
ಶೀಖರವ ಏರುತಿರುವುದಾದರು ಏಕೆ ?

ನಾ ಬೆಚ್ಚಗಿನ ಹೊದಿಕೆಯಲ್ಲಿ
ನಿದ್ರಾ ದೇವತೆಯ ಬಳಿ ಹೋದಾಗ
ನೀ ನಿದ್ರಾ ಹೀನನಾಗಿ
ದೂರಕೆ ಹೋಗುತ್ತಿರುವುದಾದರೂ ಏಕೆ?

ನಾ ನನ್ನ ಪ್ರೇಯಸಿಯ ಜೊತೆ
ಊರಿನ ಬೀದಿ ತಿರುಗುತ್ತಿರುವಾಗ
ನೀ ಮಡದಿಯ ಬಿಟ್ಟು
ಪರ್ವತ ತಪ್ಪಲ ಬಳಿ ತಿರುಗುತ್ತಿರುವುದಾದರು ಏಕೆ ?

ನಾ ಉದುರುವ ಹುಲ್ಲುಗಡ್ಡಿ
ನೀ ಪರ್ವತ ಶಿಖರ
ಈ ಉದುರುವ ಹುಲ್ಲುಗಡ್ಡಿಯ
ರಕ್ಷಿಸಲು ಪಣ ತೊಟ್ಟಿರುವುದಾದರೂ ಏಕೆ?

ನಾ ಸ್ವತಂತ್ರನು
ನೀ ಸ್ವಾತಂತ್ರ್ಯದ ರಕ್ಷಕನು
ನೀ ಕೊಟ್ಟ ಈ ಭೀಕ್ಷೆಯನ್ನು
ನೀನಿಲ್ಲದೆ ಸವಿಯುವ ಕಲ್ಪನೆಯಾದರೂ ಏಕೆ?