ಕೆಂಬಣ್ಣದ ಸೀರೆ
ವೇದಿಕೆಯ ಮೇಲೆಕೆಂಬಣ್ಣದ ಸೀರೆ,
ಮನಸ್ಸಿನ ಅಂಗಳದಲ್ಲಿ
ಹದಿಹರೆಯದ ಬಾಲೆ ,
ಕಣ್ಣೆಂಬುದು ನೋಡುತಿಹುದು
ಅವಳಂಧದ ಓಲೆ ,
ನನ್ನನ್ನು ಆವರಿಸಿಹುದು
ಮನ್ಮಥನ ಮಾಲೆ .
ಅವಳ ನೋಡಿದ ಆ ಕ್ಷಣದಿಂದ
ಹೃದಯ ತಾಪವ ತಣಿಸದಾದೆನು ಎನ್ನಲೇ,
ಅವಳ ಆ ಮೈಮಾಟವ ನೋಡಿ
ಕಣ್ಣ ಮುಚ್ಚದಾದೆನು ಎನ್ನಲೇ,
ಅವಳ ಮುಗ್ಧತೆಯ ನೋಡಿ
ಮನದ ಇಂಗಿತ ತಡೆಯದಾದೆನು ಎನ್ನಲೇ,
ಪ್ರೀತಿ ಎಂಬ ಬಲೆಗೆ ಸೋಕಿ
ನನ್ನ ನಾ ಬಂಧಿಸದಾದೆನು ಎನ್ನಲೇ
ಅವಳಿಂದ ದೂರಕೆ ಹೋಗಲೆಂದರೂ
ಮರು ದಿನವೂ ಅವಳ ಅಂದವ ಕಾಣುವೆನು
ಎಲ್ಲವೂ ಮರೆತು ಓದಲು ಕುಳಿತರೂ
ಕಾಗದದ ಪ್ರತಿಯಲ್ಲೂ ಆ ನಗುವ ಕಾಣುವೆನು
ಕಣ್ಣ ಮುಚ್ಚಿ ಧ್ಯಾನ ಮಾಡಿದರೂ
ಮೇನಕೆಯ ಹಾಗೆ ಬಳಿ ಬಂದು ಕುಳಿತು ಕೊಳ್ಳುವಳು
ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಯೊಂದು ಬಣ್ಣದಲ್ಲೂ
ಆ ಕೆಂಬಣ್ಣದ ಸೀರೆ ನನ್ನೆದುರು ಕಾಣುವುದು
ಆ ಕೆಂಬಣ್ಣದ ಸೀರೆ ನನ್ನೆದುರು ಕಾಣುವುದು