ಮರೆಯದಿರು ನೀ ಓ ಗೆಳೆಯ

10:52 AM 0 Comments A+ a-

I wrote it on engineers day.....

Dedicated to the man who dedicated his life for the nation and u cannot find a single field where he has not worked.......

The father of modern India ....
bharata ratna Sir M Visheshwarayya


ಕಡು ಕತ್ತಲದು
ಬೆಂಬಿಡದೆ ಸುತ್ತುತ್ತಿಹುದು
ಬೆಳಕಿನೆಡೆಗೆ ಕಣ್ಣಾಡಿಸುತ
ಜವ ಬರುವ ಸಮಯ ಸಮೀಪಿಸಲು
ಬೆಳಕಿನ ಹಣತೆಯ ನೀಡಿ
ಮರೆಯಾದ ಆ ಧಾರ್ಶನಿಕನ
ಮರೆಯದಿರು ನೀ ಓ ಗೆಳೆಯ.

ಜ್ಞಾನವೆಂಬ ಅರಗಿಣಿಯ
ಹುದುಕಾದುತ ದಿನ ಕಳೆಯಲು
ಬೆವರಿನ ಹನಿಗಳು
ಮುತ್ತಿನಂತೆ ಉದುರುತಿರಲು
ಜ್ಞಾನ ದೇಗುಲವ ನಿರ್ಮಿಸಿ
ಜ್ಞಾನ ದೇವತೆಯಾದ ಆ ಜ್ಞಾನಿಯ
ಮರೆಯದಿರು ನೀ ಓ ಗೆಳೆಯ

ಭೂಮಿಯನ್ನು ಉಳುಮೆಗಯ್ಯಲು
ಜಲ ದೇವನು ದೂರನಾಗಿ
ಭಂಜರು ಭೂಮಿಯ ಭಾರವೆತ್ತಿ
ತಣ್ಣೀರ ಬಟ್ಟೆಯಲಿರುತಿರಲು
ಭೂಮಿಗೆ ಜಲವ ನೀಡಿ
ಜಲರತ್ನಕ್ಕೂ ಮಿಗಿಲಾದ ಆ ಭಾರತ ರತ್ನನ
ಮರೆಯದಿರು ನೀ ಓ ಗೆಳೆಯ

ಅವರ ಸೇವೆ ತಲುಪದ ಮಣ್ಣಿಲ್ಲ
ವಯಸ್ಸಾದರೂ ಅವರ ಚೈತನ್ಯ ಕಳೆಗುಂದಲಿಲ್ಲ
ಜಲಶಕ್ತಿಯ ಮನಗಂಡ
ವಿಧ್ಯಾಭಾರತಿಯ ಸೇವೆಯಲ್ಲಿ
ಭಾರತ ಮಾತೆಯ ಮಡಿಲಲ್ಲಿ ಸಾವನ್ನಪ್ಪಿದ
ಆ ಅಮರ ಜೀವಿಯ
ಮರೆಯದಿರು ನೀ ಓ ಗೆಳೆಯ .