ಓ ಗೆಳತಿ
ಜಯದಲ್ಲಿ ನೋಡುವೆ ಓ ಗೆಳತಿ ನಿನ್ನನ್ನು ,ಜಯದ ಹಾದಿಯಲ್ಲಿ ಹೋಗುವಾಗ,
ಮನದಲ್ಲಿ ನಿನ್ನಯ ಪೂಜೆಯ ಮಾಡುವೆನು,
ಹೃದಯದ ಕದ ತಟ್ಟಿ ಬಾಚುವೆನು ನೆನಪನ್ನು.
ಸೋಲಿನಲ್ಲಿ ಜಯವನ್ನು ಕಹಿಯಲ್ಲಿ ಸಿಹಿಯನ್ನು
ಕಾಣುವಂತೆ ಮಾಡಿರುವೆ ಓ ಗೆಳತಿ, ನಿನ್ನಯ
ಆಸರೆಯಲ್ಲಿ ಮಣ್ಣೂ ಹೊನ್ನಾಯಿತು,ಕಲ್ಲೂ
ಜೇನಾಯಿತು, ಬದುಕೂ ಕನಸಾಯಿತು.
ಸಕ್ಕರೆ ಪಾಕದಲ್ಲಿ ಲವಣವನ್ನು ಬಯಸಿದಂತೆ ,
ಕಲ್ಲಿನ ಮೂರ್ತಿಯಲ್ಲಿ ದೇವರನ್ನು ಕಾಣುವಂತೆ,
ಸಭ್ಯತಾ ಮೂರ್ತಿಯಲ್ಲಿ ಪ್ರೀತಿಯಲ್ಲಿ ಕಂಡೆನು,
ಹೋಳಾದ ಜೀವನವನ್ನು ಸರಿಪದಿಸದಾದೆನು.
ನಿನ್ನಯ ಚಿತ್ರಣವನ್ನು ಮನಸ್ಸಲ್ಲಿ ನೆಲೆ ಮಾಡಿ,
ಮಹತ್ವಾಕಾಂಕ್ಷೆಯನ್ನು ಹೊತ್ತು ಸಾಗಿಹೆನು,
ನಿನ್ನನ್ನೇ ಸ್ಪೂರ್ತಿಯನ್ನಾಗಿಸಿ, ಜೀವನಾಡಿಯನ್ನಾಗಿಸಿ
ಬಾಹ್ಯಾಕಾಶ ಜೀವನದಲ್ಲಿ ಸಾಗಿಹೆನು,
ಓ ಗೆಳತಿ ನಿನ್ನನ್ನೇ ಗುರುವನ್ನಾಗಿಸಿ ಸಾಗಿಹೆನು.
1 comments:
Write commentswhose that girl?
Reply