This poem I wrote for my colleague, who is just like my elder sister. When she was getting married, I gave this as a gift to my sister along with one more poem. Her name is Mangala, so I coined this term. And her husband name is Manjunath, so I have used his name in the last stanza.
ನಿನಗೆ ಮಂಗಳವಾಗಲಿ
ನಿನಗೆ ಮಂಗಳವಾಗಲಿ
ಮಲ್ಲಿಗೆಯ ಹೂವಿನಂತಹ ನಗುವಿನಲ್ಲಿ
ಕೊಂಚ ನಾಚಿಕೆಯ ಝಲಕ್ಕು ಕಾಣುತ್ತಿರಲು
ಬೆರಳಂಚಿನಲ್ಲಿ ನಾಟ್ಯರಾಜನು ನರ್ತಿಸುತ್ತಿರಲು
ಎದೆಯಿಂದ ಪ್ರೀತಿಯ ಗುಲಾಬಿ ಅರಳುತ್ತಿರಲು
ನವ ಜೀವನಕ್ಕೆ ಕಾಲಿಡುತ್ತಿರುವ
ನಿನಗೆ ಮಂಗಳವಾಗಲಿ
ನಿನಗೆ ಮಂಗಳವಾಗಲಿ
ನವ ಯೌವನ ತುಳುಕುತ್ತಿದೆ
ಗೃಹಸ್ಥಾಶ್ರಮ ಕರೆಯುತ್ತಿದೆ
ತವರಿನ ನೆನಪುಗಳು ಕಾಡುತ್ತಿವೆ
ಬಾವನೆಗಳು ಹೊರಗೆಡುಹದೆ
ಎದೆಯಲ್ಲಿ ಏನೋ ತಲ್ಲಣವಾಗುತ್ತಿರಲು
ನಿನಗೆ ಮಂಗಳವಾಗಲಿ
ನಿನಗೆ ಮಂಗಳವಾಗಲಿ
ಹೃದಯದಲ್ಲಿ ಅವನು ಅಧಿರಾಜನು
ಅವನ ಮಾತುಗಳು ಕಿವಿಯಲ್ಲಿ ಹನಿಗಳು
ಅವನ ನಗುವು ಮನದಲ್ಲಿ ಝೇಂಕರಿಸುತ್ತಿರಲು
ಕನಸ್ಸಿನ ಗೋಪುರವು ಮುಗಿಲೆತ್ತರ ಮುಟ್ಟುತ್ತಿರಲು
ಉಲ್ಲಾಸದ ಮಳೆಯು ಚಿಮ್ಮುತ್ತಿರಲು
ನಿನಗೆ ಮಂಗಳವಾಗಲಿ
ನಿನಗೆ ಮಂಗಳವಾಗಲಿ
ಹೊಸದೊಂದು ಜಗತ್ತು ನಿನ್ನದಾಗಲಿ
ಮಂಜುನಾಥನ ದಯೆಯು ನಿನಗಿರಲಿ
ಮಧುರವಾದ ನೆನಪುಗಳೊಂದಿಗೆ
ಶಿವ ಪಾರ್ವತಿ ಮಿಲನವೂ ನಾಚುವಂತೆ
ನಿಮ್ಮ ಪ್ರೇಮೋತ್ಸವ ಸಮಿಪಿಸುತ್ತಿರಲು
ನಿನಗೆ ಮಂಗಳವಾಗಲಿ
ನಿನಗೆ ಮಂಗಳವಾಗಲಿ