Coorg , a Heaven

 Is this what heaven looks like?

Or is this path a route divine?
If heaven is where Mother Nature dwells,
Then surely, this land must be a sign.

As water tumbles from heights above,
Trying to kiss the waiting earth,
From hidden springs it softly flows,
Quenching many — a giver of worth.
Isn’t that heaven?

The hills and forests call your name,
Inviting you to trek their trail.
Each climb, a triumph of the soul,
Each step, a wind in your sail.
Isn’t that more than heaven?

Graceful girls in vibrant saris,
Traditions deep, untouched by time.
Soldiers brave with hearts of gold,
Folk dances that feel like rhyme.
Above all — isn’t this heaven?

Flavors rich in every dish,
Rivers whispering by your side.
The Kaveri Marathon's spirited run,
And homestays where warm hearts reside.
Bonfire nights, dreams alight —
Isn’t this the heaven you’ve wished tonight?

Birds in hues that stir the skies,
Invite your soul to take their flight.
Wildlife that gazes back with pride,
Nature’s roar, a gentle fright.
This wonder... this is heaven.

And as you step into this world,
Something shifts — it feels surreal.
A land that steals your every breath,
And teaches your heart to feel.
You fall in love, again, again —
For Coorg is heaven, dressed as Earth.

- Alemari Kavi


Fear of losing the dearest one

When Life Took a Crucial Turn

When life had reached its hardest phase,

The mother of all testing days,

As if my soul was set to flee-

You made the choice seem light for me.

To chase my dreams or stay a friend,

You helped me weigh what fate might send.


When I climbed life’s daunting hill,

With weary heart, yet iron will,

And when I thought I’d had enough,

Your gentle smile made paths less rough.

Through trials steep and battles grim,

You fueled my will to strive and win.


When I stepped on failure’s floor,

Each loss more cutting than before,

As if success would never near,

Your life gave hope to crush my fear.

Armed with dreams and fearless mind,

I fought the thorns you left behind.


But now that fate gives me one stage—

A moment to unleash my rage,

To show the world my silent fire,

Your death made me a helpless friend,

Though love from you poured like the rain,

I failed to give it back again.


When I beheld the Taj in flame,

That cruelest day, none could name,

As if I tried to let you go,

The haunting faces told me “No.”

So many gone, so much destroyed—

Yet we stood helpless in the void.


The nation drowned in solemn grief,

Each face a mirror of belief.

As I broke down in silent cries,

Your memories swelled within my eyes.

I pray Fear of losing the dearest one

May not come to anyone.



ಮರೆಯಾಗದಿರಲಿ ಅವನ ನೆನಪು

 ಏಕಾಂತದಲ್ಲೂ  ನಿನ್ನ  ಗುರುತಿದೆ, 

ಮರೆಯಾದರೂ  ನಿನ್ನ  ನೆನಪಿದೆ. 

ಉಸಿರಲ್ಲೂ  ಸೋಕಿರೋ  ಗಾಳಿಯಲ್ಲಿ 

ನಿನ್ನ  ಹೆಸರಿದೆ. 


ಹೇಗೆ  ಕಳುಹಿಸಲಿ  

ನನ್ನ  ಮನದಾಳದ  ಮಾತುಗಳನ್ನು,

ಎಲ್ಲಿ  ಕಳುಹಿಸಲಿ  

ನನ್ನ  ಪ್ರೇಮದ  ಸಂದೇಶವನ್ನು ?


ಕಾಣದ  ಊರಿಗೆ  ಹೋಗಿರೋ  ನಿನಗೆ, 

ಕರೆದು  ಹೋಗಿರೋ  ಯಮನಿಗೆ ,

ಮರಣದ  ತೇರಲಿ  ನನ್ನ 

ಎಳೆದು  ಹೋಗಲು  ಭಯವೇಕೆ  ?


ಧರ್ಮದ  ಹೆಸರಲಿ  ದ್ವೇಷವ  ಬಿತ್ತುವ 

ಕ್ರೂರಿಗಳಿಗೆ  ಹೇಗೆ  ಹೇಳಲಿ ?

ದಯೆಯೇ   ಧರ್ಮದ  ಮೂಲ,  

ಪ್ರೀತಿಯೇ  ಮನುಕೂಲದ  ಧ್ಯೇಯ .


ಬಂದೂಕುಗಳಿಗೆ  ಸೂತ್ರಧಾರರಾದ 

ನೆರೆಹೊರೆಯರಿಗೆ  ಹೇಗೆ  ಹೇಳಲಿ ?

ನಿಮ್ಮ  ಮೆನೆಗೆ  ಬೆಂಕಿ  

ನೀವೇ  ಹಾಕುವ  ತವಕವೇಕೆ  ?


ಮತ್ತದೇ  ಮೌನ  ,

ಮತ್ತದೇ  ಸಾವಿನ  ಛಾಯೆ, 

ನಿಮ್ಮ  ಕ್ರೂರತೆಗೆ  ಕನ್ನಡಿ ಹಿಡಿಯುವ 

ಸಮಯ  ಬಂದಾಗಿದೆ .


ಆದರೂ, ನನ್ನ  ಪ್ರೀತಿಯ  ಸಾವೇಕೆ?

ನನ್ನ  ಸಿಂಧೂರವನ್ನು ಅಳಿಸಿರುವುದೇಕೆ. 

ಕಣ್ಣೆರ  ಹನಿಯಲಿರುವ  ನೋವನು 

ಹೇಳಲಾದರೂ  ಯಾರ  ಬಳಿ? 


ಅಗಸದೆತ್ತರ  ನೋಡಲು 

ಅವನ  ಛಾಯೆ  ಕಾಣಿಸಲು 

ಬಿಗಿದಪ್ಪಿ  ಹಿಡಿಯಲು 

ಹಾರುವ  ಆಸೆ 


ಸರಿಯುತ್ತಿರುವ  ಮೋಡಗಳಿಗೆ 

ಸಾಲು  ಸಾಲು  ಕರೆಯುವ  ಆಸೆ. 

ನನ್ನ  ಇನಿಯನ  ಬಳಿ 

ಪ್ರೀತಿಯನು  ಸಾರುವ  ಆಸೆ ,


ಪ್ರತಿ ಜಿನುಗುವ ಹನಿಯಲ್ಲೂ

ಕಣ್ಣೀರನ್ನು ಒರೆಸುವ ಆಸೆ,

ಮರೆಯಾಗದಿರಲಿ  ಅವನ  ನೆನಪು  ಎಂದು 

ಸಾಲು  ಸಾಲು  ಗೀಚುವ  ಆಸೆ.


ಮೋಡದ  ಮರೆಯಲಿ  ನಿಂತು 

ಅವನು  ಇದನ್ನು  ಓದಲು 

ನನ್ನ  ಜೀವನದ  ದ್ಯೇಯವ 

ಪಾವನವಾಗಿಸುವ  ಆಸೆ .


ಮರೆಯಾಗದಿರಲಿ  ಅವನ  ನೆನಪು.

ಏಕಾಂತದಲ್ಲೂ ಅವನ ಗುರುತು.


Take me back

 Take me back

to the moments etched in beauty,

to a day filled with love,

where I asked for nothing in return.


Carry me to the time

when our eyes first met,

when love bloomed in a glance,

though I barely knew you.


As days went by,

my thoughts circled around you.

your joys, your quirks,

what made your heart lighter.


And as time passed,

I found myself lost in love.

Your kindness touched my soul,

your laughter became my light.


Each passing day,

I longed to be by your side.

not knowing if it was right,

not knowing if your heart beat for mine.


I cared in silence,

too afraid to confess what I felt.

so I poured my love

into verses and stories untold.


Then came the truth.

I watched from afar as you said “I do.”

All I could offer

was a silent wish for your happiness.


Still the days moved on,

and I tried to wake from the dream.

Through travels and quiet heartbreak,

your memory lingered on.


I read the books you loved,

listened to songs you adored,

watched the films that moved you,

trying to meet you in the echoes.


In those moments,

I gathered light from your shadow.

Music, stories, and journeys

helped me step beyond the pain.


And so, with time,

I came to cherish you for who you are.

What began as love

became the mirror of my becoming.


So take me with you.

wherever you may be.

As our days grow shorter,

let’s taste eternity together.


Take me with you,

let love bloom once more,

far from worry and doubt,

in a world of grace and innocence.

-AlemariKavi



ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ

ನಾನು ದಿನಾಲೂ ಓದುವ 

ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ


ಓಂ ಶ್ರೀ ಸಾಯಿನಾಥಾಯ ನಮಃ ।

ಓಂ ಲಕ್ಷ್ಮೀನಾರಾಯಣಾಯ ನಮಃ ।

ಓಂ ಕೃಷ್ಣರಾಮಶಿವಮಾರುತ್ಯಾದಿರೂಪಾಯ ನಮಃ ।

ಓಂ ಶೇಷಶಾಯಿನೇ ನಮಃ ।

ಓಂ ಗೋದಾವರೀತಟಶಿರಡೀವಾಸಿನೇ ನಮಃ ।

ಓಂ ಭಕ್ತಹೃದಾಲಯಾಯ ನಮಃ ।

ಓಂ ಸರ್ವಹೃನ್ನಿಲಯಾಯ ನಮಃ ।

ಓಂ ಭೂತಾವಾಸಾಯ ನಮಃ ।

ಓಂ ಭೂತಭವಿಷ್ಯದ್ಭಾವವರ್ಜಿತಾಯ ನಮಃ ।

ಓಂ ಕಾಲಾತೀತಾಯ ನಮಃ ॥ 10 ॥


ಓಂ ಕಾಲಾಯ ನಮಃ ।

ಓಂ ಕಾಲಕಾಲಾಯ ನಮಃ ।

ಓಂ ಕಾಲದರ್ಪದಮನಾಯ ನಮಃ ।

ಓಂ ಮೃತ್ಯುಂಜಯಾಯ ನಮಃ ।

ಓಂ ಅಮರ್ತ್ಯಾಯ ನಮಃ ।

ಓಂ ಮರ್ತ್ಯಾಭಯಪ್ರದಾಯ ನಮಃ ।

ಓಂ ಜೀವಾಧಾರಾಯ ನಮಃ ।

ಓಂ ಸರ್ವಾಧಾರಾಯ ನಮಃ ।

ಓಂ ಭಕ್ತಾವಸನಸಮರ್ಥಾಯ ನಮಃ ।

ಓಂ ಭಕ್ತಾವನಪ್ರತಿಜ್ಞಾಯ ನಮಃ ॥ 20 ॥


ಓಂ ಅನ್ನವಸ್ತ್ರದಾಯ ನಮಃ ।

ಓಂ ಆರೋಗ್ಯಕ್ಷೇಮದಾಯ ನಮಃ ।

ಓಂ ಧನಮಾಂಗಳ್ಯಪ್ರದಾಯ ನಮಃ ।

ಓಂ ಋದ್ಧಿಸಿದ್ಧಿದಾಯ ನಮಃ ।

ಓಂ ಪುತ್ರಮಿತ್ರಕಲತ್ರಬಂಧುದಾಯ ನಮಃ ।

ಓಂ ಯೋಗಕ್ಷೇಮವಹಾಯ ನಮಃ ।

ಓಂ ಆಪದ್ಬಾಂಧವಾಯ ನಮಃ ।

ಓಂ ಮಾರ್ಗಬಂಧವೇ ನಮಃ ।

ಓಂ ಭುಕ್ತಿಮುಕ್ತಿಸ್ವರ್ಗಾಪವರ್ಗದಾಯ ನಮಃ ।

ಓಂ ಪ್ರಿಯಾಯ ನಮಃ ॥ 30 ॥


ಓಂ ಪ್ರೀತಿವರ್ಧನಾಯ ನಮಃ ।

ಓಂ ಅಂತರ್ಯಾಮಿನೇ ನಮಃ ।

ಓಂ ಸಚ್ಚಿದಾತ್ಮನೇ ನಮಃ ।

ಓಂ ನಿತ್ಯಾನಂದಾಯ ನಮಃ ।

ಓಂ ಪರಮಸುಖದಾಯ ನಮಃ ।

ಓಂ ಪರಮೇಶ್ವರಾಯ ನಮಃ ।

ಓಂ ಪರಬ್ರಹ್ಮಣೇ ನಮಃ ।

ಓಂ ಪರಮಾತ್ಮನೇ ನಮಃ ।

ಓಂ ಜ್ಞಾನಸ್ವರೂಪಿಣೇ ನಮಃ ।

ಓಂ ಜಗತಃಪಿತ್ರೇ ನಮಃ ॥ 40 ॥


ಓಂ ಭಕ್ತಾನಾಂಮಾತೃದಾತೃಪಿತಾಮಹಾಯ ನಮಃ ।

ಓಂ ಭಕ್ತಾಭಯಪ್ರದಾಯ ನಮಃ ।

ಓಂ ಭಕ್ತಪರಾಧೀನಾಯ ನಮಃ ।

ಓಂ ಭಕ್ತಾನುಗ್ರಹಕಾತರಾಯ ನಮಃ ।

ಓಂ ಶರಣಾಗತವತ್ಸಲಾಯ ನಮಃ ।

ಓಂ ಭಕ್ತಿಶಕ್ತಿಪ್ರದಾಯ ನಮಃ ।

ಓಂ ಜ್ಞಾನವೈರಾಗ್ಯದಾಯ ನಮಃ ।

ಓಂ ಪ್ರೇಮಪ್ರದಾಯ ನಮಃ ।

ಓಂ ಸಂಶಯಹೃದಯ ದೌರ್ಬಲ್ಯ ಪಾಪಕರ್ಮವಾಸನಾಕ್ಷಯಕರಾಯ ನಮಃ ।

ಓಂ ಹೃದಯಗ್ರಂಥಿಭೇದಕಾಯ ನಮಃ ॥ 50 ॥


ಓಂ ಕರ್ಮಧ್ವಂಸಿನೇ ನಮಃ ।

ಓಂ ಶುದ್ಧಸತ್ವಸ್ಥಿತಾಯ ನಮಃ ।

ಓಂ ಗುಣಾತೀತಗುಣಾತ್ಮನೇ ನಮಃ ।

ಓಂ ಅನಂತಕಳ್ಯಾಣಗುಣಾಯ ನಮಃ ।

ಓಂ ಅಮಿತಪರಾಕ್ರಮಾಯ ನಮಃ ।

ಓಂ ಜಯಿನೇ ನಮಃ ।

ಓಂ ದುರ್ಧರ್ಷಾಕ್ಷೋಭ್ಯಾಯ ನಮಃ ।

ಓಂ ಅಪರಾಜಿತಾಯ ನಮಃ ।

ಓಂ ತ್ರಿಲೋಕೇಷು ಅವಿಘಾತಗತಯೇ ನಮಃ ।

ಓಂ ಅಶಕ್ಯರಹಿತಾಯ ನಮಃ ॥ 60 ॥


ಓಂ ಸರ್ವಶಕ್ತಿಮೂರ್ತಯೇ ನಮಃ ।

ಓಂ ಸ್ವರೂಪಸುಂದರಾಯ ನಮಃ ।

ಓಂ ಸುಲೋಚನಾಯ ನಮಃ ।

ಓಂ ಬಹುರೂಪವಿಶ್ವಮೂರ್ತಯೇ ನಮಃ ।

ಓಂ ಅರೂಪವ್ಯಕ್ತಾಯ ನಮಃ ।

ಓಂ ಅಚಿಂತ್ಯಾಯ ನಮಃ ।

ಓಂ ಸೂಕ್ಷ್ಮಾಯ ನಮಃ ।

ಓಂ ಸರ್ವಾಂತರ್ಯಾಮಿನೇ ನಮಃ ।

ಓಂ ಮನೋವಾಗತೀತಾಯ ನಮಃ ।

ಓಂ ಪ್ರೇಮಮೂರ್ತಯೇ ನಮಃ ॥ 70 ॥


ಓಂ ಸುಲಭದುರ್ಲಭಾಯ ನಮಃ ।

ಓಂ ಅಸಹಾಯಸಹಾಯಾಯ ನಮಃ ।

ಓಂ ಅನಾಥನಾಥದೀನಬಂಧವೇ ನಮಃ ।

ಓಂ ಸರ್ವಭಾರಭೃತೇ ನಮಃ ।

ಓಂ ಅಕರ್ಮಾನೇಕಕರ್ಮಾಸುಕರ್ಮಿಣೇ ನಮಃ ।

ಓಂ ಪುಣ್ಯಶ್ರವಣಕೀರ್ತನಾಯ ನಮಃ ।

ಓಂ ತೀರ್ಥಾಯ ನಮಃ ।

ಓಂ ವಾಸುದೇವಾಯ ನಮಃ ।

ಓಂ ಸತಾಂಗತಯೇ ನಮಃ ।

ಓಂ ಸತ್ಪರಾಯಣಾಯ ನಮಃ ॥ 80 ॥


ಓಂ ಲೋಕನಾಥಾಯ ನಮಃ ।

ಓಂ ಪಾವನಾನಘಾಯ ನಮಃ ।

ಓಂ ಅಮೃತಾಂಶುವೇ ನಮಃ ।

ಓಂ ಭಾಸ್ಕರಪ್ರಭಾಯ ನಮಃ ।

ಓಂ ಬ್ರಹ್ಮಚರ್ಯತಪಶ್ಚರ್ಯಾದಿ ಸುವ್ರತಾಯ ನಮಃ ।

ಓಂ ಸತ್ಯಧರ್ಮಪರಾಯಣಾಯ ನಮಃ ।

ಓಂ ಸಿದ್ಧೇಶ್ವರಾಯ ನಮಃ ।

ಓಂ ಸಿದ್ಧಸಂಕಲ್ಪಾಯ ನಮಃ ।

ಓಂ ಯೋಗೇಶ್ವರಾಯ ನಮಃ ।

ಓಂ ಭಗವತೇ ನಮಃ ॥ 90 ॥


ಓಂ ಭಕ್ತವತ್ಸಲಾಯ ನಮಃ ।

ಓಂ ಸತ್ಪುರುಷಾಯ ನಮಃ ।

ಓಂ ಪುರುಷೋತ್ತಮಾಯ ನಮಃ ।

ಓಂ ಸತ್ಯತತ್ತ್ವಬೋಧಕಾಯ ನಮಃ ।

ಓಂ ಕಾಮಾದಿಷಡ್ವೈರಿಧ್ವಂಸಿನೇ ನಮಃ ।

ಓಂ ಅಭೇದಾನಂದಾನುಭವಪ್ರದಾಯ ನಮಃ ।

ಓಂ ಸಮಸರ್ವಮತಸಮ್ಮತಾಯ ನಮಃ ।

ಓಂ ಶ್ರೀದಕ್ಷಿಣಾಮೂರ್ತಯೇ ನಮಃ ।

ಓಂ ಶ್ರೀವೇಂಕಟೇಶರಮಣಾಯ ನಮಃ ।

ಓಂ ಅದ್ಭುತಾನಂದಚರ್ಯಾಯ ನಮಃ ॥ 100 ॥


ಓಂ ಪ್ರಪನ್ನಾರ್ತಿಹರಾಯ ನಮಃ ।

ಓಂ ಸಂಸಾರಸರ್ವದುಃಖಕ್ಷಯಕರಾಯ ನಮಃ ।

ಓಂ ಸರ್ವವಿತ್ಸರ್ವತೋಮುಖಾಯ ನಮಃ ।

ಓಂ ಸರ್ವಾಂತರ್ಬಹಿಸ್ಥಿತಾಯ ನಮಃ ।

ಓಂ ಸರ್ವಮಂಗಳಕರಾಯ ನಮಃ ।

ಓಂ ಸರ್ವಾಭೀಷ್ಟಪ್ರದಾಯ ನಮಃ ।

ಓಂ ಸಮರಸನ್ಮಾರ್ಗಸ್ಥಾಪನಾಯ ನಮಃ ।

ಓಂ ಶ್ರೀಸಮರ್ಥಸದ್ಗುರುಸಾಯಿನಾಥಾಯ ನಮಃ ॥ 108 ॥



ನನಗೆ ತುಂಬಾ ಇಷ್ಟವಾದ ೪೦ ಕನ್ನಡ ಚಿತ್ರ ಗೀತೆಗಳು

 1.ಯಾವ  ಮೋಹನ  ಮುರಳಿ ಕರೆಯಿತು  ( ಅಡಿಗರು  - ರಾಜು  ಅನಂತ ಸ್ವಾಮಿ  ,ಸಂಗೀತ  ಕಟ್ಟಿ  - ಮನು ಮೂರ್ತಿ )

2. ಮನಸೇ  ಬದುಕು  ನಿನಗಾಗಿ  (ಕಲ್ಯಾಣ್  - ಎಸ್.ಪಿ. ಬಿ  - ದೇವಾ)

3. ನಗುವ  ನಯನ  ಮಧುರ  ಮೌನ  -(ಆರ್ ಏನ್ ಜಯಗೋಪಾಲ್  - ಎಸ್ ಜಾನಕಿ  , ಎಸ್.ಪಿ. ಬಿ  - ಇಳಿಯರಾಜ )


4. ಜೊತೆಯಲಿ  ಜೊತೆ  ಜೊತೆಯಲಿ  - (ಚಿ. ಉದಯಶಂಕರ್ - ಎಸ್ ಜಾನಕಿ  , ಎಸ್.ಪಿ. ಬಿ  - ಇಳಿಯರಾಜ )

 ನೂರು  ಜನ್ಮಕೂ  ( ನಾಗತಿಹಳ್ಳಿ  ಚಂದ್ರಶೇಖರ್  - ರಾಜೇಶ್  ಕೃಷ್ಣನ್  - ಮನೋ  ಮೂರ್ತಿ)

 6. ಈ  ಸುಂದರ  - (ಕಲ್ಯಾಣ್  , ಎಸ್.ಪಿ. ಬಿ, ಚಿತ್ರ  - ದೇವಾ )


7. ಕವಿತೆ  ಕವಿತೆ  ( ಹೃದಯ  ಶಿವ  - ವಿಜಯ್  ಪ್ರಕಾಶ್  - ವಿ. ಹರಿಕೃಷ್ಣ ) 

8. ತುಂತುರು  (ಕಲ್ಯಾಣ್  ,  ಚಿತ್ರ  - ದೇವಾ )


9. ಸ್ವಾತಿ  ಮುತ್ತಿನ  ಮಳೆ  ಹನಿಯೇ ( ಹಂಸಲೇಖ  - ಎಸ್ ಜಾನಕಿ  , ಎಸ್.ಪಿ. ಬಿ- ಹಂಸಲೇಖ)

10. ನೂರೊಂದು  ನೆನಪು - (ಆರ್ ಏನ್ ಜಯಗೋಪಾಲ-  ಎಸ್.ಪಿ. ಬಿ  - ಎಂ. ರಂಗಾರಾವ್ )


11. ನಾದಮಯ  - (ಚಿ. ಉದಯಶಂಕರ್- ಡಾ. ರಾಜಕುಮಾರ  - ಉಪೇಂದ್ರ ಕುಮಾರ)


12. ಈ ಭೂಮಿ ಬಣ್ಣದ ಬುಗುರಿ   -  ( ಹಂಸಲೇಖ  - ಎಸ್.ಪಿ. ಬಿ - ಹಂಸಲೇಖ)



13. ನಗು ಎಂದಿದೆ ಮಂಜಿನ  ಬಿಂದು    ( ಆರ್ ಏನ್ ಜಯಗೋಪಾಲ - ಎಸ್ ಜಾನಕಿ - ಇಳಿಯರಾಜ)



14. ಘಾಟಿಯ ಇಳಿದು   - (ರಕ್ಷಿತ್  ಶೆಟ್ಟಿ  -  ವಿಜಯ್  ಪ್ರಕಾಶ್ , ಅಜನೀಶ್  - ಅಜನೀಶ್ )

15. ಕಾಗದದ ದೋಣಿಯಲಿ  (ಜಯಂತ್  ಕಾಯ್ಕಿಣಿ  - ವಾಸುಖಿ  - ಅಜನೀಶ್  ಲೋಕನಾಥ್ )


16 ಅರಳುವ ಹೂವುಗಳೇ  (ಕಲ್ಯಾಣ್  ,  ಚಿತ್ರ  - ಭಾರದ್ವಾಜ್ )


17. ಬಾನಿಗೊಂದು ಎಲ್ಲೆ ಎಲ್ಲಿದೆ  (ಚಿ. ಉದಯಶಂಕರ್- ಡಾ. ರಾಜಕುಮಾರ  - ಉಪೇಂದ್ರ ಕುಮಾರ)



ಬಾನಿಗೊಂದು ಎಲ್ಲೆ ಎಲ್ಲಿದೆ

ಚಿತ್ರ : ಪ್ರೇಮದ ಕಾಣಿಕೆ
ರಚನೆ : ಚಿ. ಉದಯಶಂಕರ್ 
ಸಂಗೀತ : ಉಪೇಂದ್ರ ಕುಮಾರ್ 
ಗಾಯಕ/ನಟ : ಡಾ. ರಾಜಕುಮಾರ್ 

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ 
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು 

ಆಸೆಯಂಬ ಬಿಸಿಲುಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನಸಿದಂತೆ ಬಾಳಲೇನು ನೆಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೆ ಆಗಲಿ ಅವನೆ ಕಾರಣ

ಬಾನಿಗೊಂದು ಎಲ್ಲೆ ಎಲ್ಲಿದೆ


ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು 
ಬಯಸಿದಾಗ ಕಾಣದಿರುವ ಎರಡು ಮುಖಗಳು 
ಹರುಷ ಒಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ
ಅದೇನೆ ಬಂದರು ಅವನ ಕಾಣಿಕೆ

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು
ನಿಧಾನಿಸು ನಿಧಾನಿಸು, ನಿಧಾನಿಸು ನಿಧಾನಿಸು

18.ಆಡಿಸಿ ನೋಡು ,ಬೀಳಿಸಿ ನೋಡು   (ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್  - ಜಿ.ಕೆ. ವೆಂಕಟೇಶ್ )


19. ಸಂಗಾತಿ ನೀನು ದೂರಾದ ಮೇಲೆ  (ನಾಗೇಂದ್ರ ಪ್ರಸಾದ್ -  ಎಲ್ ಏನ್ ಶಾಸ್ತ್ರೀ - ಚೈತನ್ಯ )


20. ಹುಟ್ಟಿದರೆ  ಕನ್ನಡ  ನಾಡಲ್ಲಿ  ಹುಟ್ಟ ಬೇಕು ( ಹಂಸಲೇಖ - ಡಾ. ರಾಜಕುಮಾರ  - ಹಂಸಲೇಖ)


21. ದೀಪವು ನಿನ್ನದೇ, ಗಾಳಿಯು ನಿನ್ನದೇ (ಕೆ ನರಸಿಂಹಸ್ವಾಮಿ - ಎಸ್ ಜಾನಕಿ- ಸಿ ಅಶ್ವಥ್ )


22. ತಾಯೆ ಶಾರದೆ  - ಬೆಟ್ಟದ ಹೂವು  ( ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ , ಮಾಸ್ಟರ್ ಲೋಹಿತ್  - ರಾಜನ್ ನಾಗೇಂದ್ರ)


23. ಮರಳಿ ಮರೆಯಾಗಿ  ( ಸುಧೀರ್ ಅತ್ತಾವರ್ - ಸಾಧನಾ ಸರ್ಗಮ್ - ಮಣಿಕಂಠ ಖದ್ರಿ)


24.  ಹೇ ಶಾರದೇ  (  ಕಲ್ಯಾಣ್ - ಆಶಾ ಸುನಿಧಿ    -   ವಾಸುಖಿ)


25. ಒಂದು ಮಳೆಬಿಲ್ಲು ( ನಾಗೇಂದ್ರ ಪ್ರಸಾದ್ -  ಅರ್ಮಾನ್ ಮಲಿಕ್ , ಶ್ರೇಯಾ ಘೋಷಾಲ್   - ಅರ್ಜುನ್ ಜನ್ಯ )

26. ನಾವಾಡುವ ನುಡಿಯೇ ಕನ್ನಡ ನುಡಿ ( ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ರಾಜನ್ ನಾಗೇಂದ್ರ)


27.  ಒಲವಿನ ಉಡುಗೊರೆ ಕೊಡಲೇನು (ಆರ್ ಏನ್ ಜಯಗೋಪಾಲ - ಪಿ  ಜಯಚಂದ್ರನ್,  ಪಿ ಸುಶೀಲ  -  ಎಂ. ರಂಗಾರಾವ್)


28. ಕನಸಲೂ ನೀನೆ , ಮನಸಲೂ ನೀನೆ ( ಚಿ. ಉದಯಶಂಕರ್ -  ಎಸ್.ಪಿ. ಬಿ,ವಾಣಿ ಜಯರಾಮ್ - ರಾಜನ್ ನಾಗೇಂದ್ರ)


29. ಎಲ್ಲಿರುವೆ ಮನವ ಕಾಡುವ ರೂಪಸಿಯೇ ( ಚಿ. ಉದಯಶಂಕರ್ -  ಎಸ್.ಪಿ. ಬಿ - ರಾಜನ್ ನಾಗೇಂದ್ರ)

30. ನಿನದೆ ನೆನಪು ದಿನವೂ ಮನದಲಿ (ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್  -  ಜಿ.ಕೆ. ವೆಂಕಟೇಶ್)


31. ಅವನಲ್ಲಿ  ಇವಳಿಲ್ಲಿ   ( ಉಪೇಂದ್ರ   - ಎಲ್ ಏನ್ ಶಾಸ್ತ್ರೀ - ಸಾಧು ಕೋಕಿಲ )

32. ರೆಕ್ಕೆಯ  (ನಾಗೇಂದ್ರ ಪ್ರಸಾದ್ - ಎಸ್.ಪಿ. ಬಿ, ಶ್ರೇಯಾ  ಜಯದೀಪ್ - ಅರ್ಜುನ್ ಜನ್ಯ)


33 ಉಸಿರೇ ಉಸಿರೇ  ( ಕಲ್ಯಾಣ್ -  ರಾಜೇಶ್  ಕೃಷ್ಣನ್ - ರಾಜೇಶ್ ರಮಾನಾಥ್ )


34. ಕೆಣುಕುತಿದೆ ನಿನ್ನ ಕಣ್ಣೋಟ   (ಚಿ. ಉದಯಶಂಕರ್ - ಎಸ್.ಪಿ. ಬಿ - ಉಪೇಂದ್ರ ಕುಮಾರ)


35. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ (ದೊಡ್ಡರಂಗೇ  ಗೌಡ - ಚಿತ್ರ , ಎಸ್.ಪಿ. ಬಿ - ಹಂಸಲೇಖ)

36. ಮುಂಗಾರು ಮಳೆಯೇ ( ಯೋಗರಾಜ್ ಭಟ್ - ಸೋನು ನಿಗಮ್  - ಮನು ಮೂರ್ತಿ)



37. ಮಳೆಯಲಿ ಮಿಂದ ಹೂವಿನ ಹಾಗೆ ( ಎ. ಪಿ ಅರ್ಜುನ್  - ವಿಶಾಲ್ ದಡ್ಲಾನಿ - ವಿಜಯ್  ಪ್ರಕಾಶ್)


38. ಮೊದಲ ಮಳೆಯಂತೆ (ಕವಿರಾಜ್ - ಸೋನು ನಿಗಮ್,  ಶ್ರೇಯಾ ಘೋಷಾಲ್  - ಜೆಸ್ಸಿ ಗಿಫ್ಟ್ )

39. ಅನಿಸುತಿದೆ ಯಾಕೋ ಇಂದು (ಜಯಂತ್  ಕಾಯ್ಕಿಣಿ  -ಸೋನು ನಿಗಮ್  - ಮನು ಮೂರ್ತಿ)


40. ಇನ್ನೂನೂ ಬೇಕಾಗಿದೆ (ಪ್ರಮೋದ್ ಮರವಂತೆ - ವಾಸುಕಿ - ವಾಸುಕಿ)


ಕ್ಷಣ ಕ್ಷಣ ಕಳೆಯುತಿರಲು

ಕ್ಷಣ  ಕ್ಷಣ  ಕಳೆಯುತಿರಲು 

ಇನ್ಯಾರಿಗೋಸ್ಕರ  ಎಂಬ  ಈ  ಜೀವವು,

ಹಸುಗೂಸೊಂದು ಕರೆಯಲು  ನನ್ನ  

ಅವಳೇ  ಉಳಿದ  ಬದುಕಿನ  ನಿಮಿತ್ತವು.


ಕಾಣದ  ಕತ್ತಲಲ್ಲಿ  ದೀಪವಾಗಿ  ಬಂದೆ 

ಅಲೆಗಳಿಂದ  ತತ್ತರಿಸಿದ  ಜೀವಕೆ  ದಡವಾಗಿ  ಬಂದೆ 

ಪ್ರೀತಿಯ  ಹಾತೊರಿದ  ಮನಸ್ಸಿಗೆ  ಜೇನಾಗಿ  ಬಂದೆ 

ಕಾಣದ  ದಾರಿಗೆ  ಅಕ್ಷಿಯಾಗಿ  ಬಂದೆ .


ನಿನ್ನ  ನಗುವಲ್ಲಿ  ಜೀವನದ  ಅರ್ಥವ  ಕಂಡೆ 

ನಿನ್ನ  ನಡೆಯಲಿ  ಮುಂದಿನ  ಪುಟಗಳ  ಕಂಡೆ 

ನಿನ್ನ  ಹಟದಲಿ ನನಗರಿಯದ  ತಾಳ್ಮೆಯ  ಕಂಡೆ 

ನೀನಿರದ  ಕ್ಷಣದಲಿ  ನಿನ್ನ  ನೆನಪಲ್ಲೆ ಮುಳುಗಿದ  ತಂದೆಯ  ಕಂಡೆ 


ನಿನ್ನ  ಸ್ಪರ್ಶದಲಿ  ನನ್ನ  ಮುಗ್ಧತೆಯ  ಕಂಡೆ 

ನಿನ್ನ  ಜೋಗುಳದಲಿ  ನನ್ನ  ಸ್ವರಗಳ  ಕಂಡೆ 

ನಿನ್ನ  ತುಟಿಯಲಿ  ಮಾತುಗಳ  ಮುತ್ತುಗಳನು  ಕಂಡೆ 

ನಿನ್ನ  ಅಪ್ಪುಗೆಯಲಿ  ಇದೆ  ನನ್ನ  ಜಗವೆಂದು  ಅಂದು  ಕೊಂಡೆ 


ಈ  ಕ್ಷಣವು  ಜೀವನದ  ರಸಮಯ  ಕ್ಷಣವು 

ಕಳೆದು  ಹೋದರೆ  ಮತ್ತೆ  ಸಿಗದ  ಮಧುರ  ಕ್ಷಣವು

ಅಪ್ಪ  ಎನ್ನುವ  ಹೃದಯಲಿ  ಇರಲಿ  ಕಿಂಚಿತ್ತಿನ  ಸ್ಥಾನವು 

ಇನ್ನಷ್ಟು  ಬೆಳೆಯಲಿ  ನನ್ನಲ್ಲಿ  ತಾಯಿಯ  ಮಮಕಾರವು.


ಜಗದೊಡೆಯನಿಗೆ  ನಮಿಸುವೆ 

ಮನದರಸಿಯ  ಪ್ರೀತಿಸುವೆ 

ನನ್ನ  ಬುವಿಗೆ  ತಂದಿರಿಸಿದ 

ಆ  ನನ್ನ  ದೇವತೆಗೆ  ಪ್ರಾರ್ಥಿಸುವೆ  


ಕ್ಷಣ  ಕ್ಷಣ  ಕಳೆಯುತಿರಲು 

ಪ್ರತಿ  ಕ್ಷಣವನು  ಸೆರೆ  ಹಿಡಿಯುವೆ 

ನಡೆದ  ಹಾದಿಯಲಿ  

ಕಂದನು ತಲೆಯೆತ್ತಿ  ನಡೆಯುವಂತೆ  ಮುನ್ನುಗ್ಗುವೆ 

ಸ್ವಾಭಿಮಾನದಿ  ಕರೆಗೆ ಓಗುಡುವೆ 


ಈ  ಕ್ಷಣವು  ಜೀವನದ  ರಸಮಯ  ಕ್ಷಣವು 

ಕಳೆದು  ಹೋದರೆ  ಮತ್ತೆ  ಸಿಗದ  ಮಧುರ  ಕ್ಷಣವು

ಕ್ಷಣ  ಕ್ಷಣ  ಕಳೆಯುತಿರಲು 

ಅವಳೇ  ಉಳಿದ  ಬದುಕಿನ  ನಿಮಿತ್ತವು.



ಅವಳು ತಿಳಿದಂತೆ ನಾನು

 ಈ ಕಥೆ ಬರೆದಿದ್ದು ನನ್ನ ಹುಬ್ಬಳ್ಳಿ ಧಾರವಾಡದ ಸಮಯದಲ್ಲಿ. ನನ್ನ ಬರವಣಿಗೆ ಆ ದಿನದ ನನ್ನ ಯೋಚನಾ ಲಹರಿಯ ಪ್ರೌಢಿಮೆ ಹೇಗಿತ್ತೋ ಹಾಗೆ ಕಥೆಯನ್ನು ಪೋಣಿಸಿದ್ದೆ. ಅದರಲ್ಲಿ ಬರುವ ಕಥಾ ಸನ್ನಿವೇಶ ಪಾತ್ರಗಳನ್ನು ನಿಜವಾದ ಪಾತ್ರಗಳ ಜೊತೆ ಜೋಡಿಸಿದ್ದೆ. ಇದು ಕಾಲ್ಪನಿಕ ಅಂತ ಮಾತ್ರ ಹೇಳಬಲ್ಲೆ. ಈ ಕಥಾ ನಾಯಕ ನಾಯಕನೇ ಅಲ್ಲ. ಅವನೊಂದು ಕಲ್ಪನೆ. ಅವನೊಂದು ಸ್ನೇಹ. ಅವನೊಂದು ಪ್ರೀತಿ. ಅವನೊಂದು ನಿರ್ಲ್ಯಕ್ಷ್ಯ, ಅವನೊಂದು ಅಂಜುಬುರುಕ, ಅವನೊಬ್ಬ ಹಠಮಾರಿ, ಅವನೊಬ್ಬ ಸಮಯ ತನ್ನೊಂದಿಗಿದೆ ಎಂದು ತಿಳಿದಿರುವ ಮೂರ್ಖ, ಇನ್ನೂ ಹಲವಾರು. ಓದಿ ನೀವೇ ಹೇಳಿ ಅವನೇನೆಂದು.

ಹುಬ್ಬಳ್ಳಿಯ ಜನಜಂಗುಳಿ ಇರುವ ಸ್ಥಳ ಅದು. ರೈಲ್ವೆ ನಿಲ್ದಾಣದ ಮುಂದಿನ ರಸ್ತೆ. ಅಲ್ಲೇ ಹತ್ತಿರ ಇರುವ ಮಿಶ್ರ ಚಾಟ್ ಅಲ್ಲಿ ನನ್ನ ಸ್ನೇಹಿತನ ಜೊತೆ ಕಚೋರಿ ತಿಂದು ಮುಗಿಸಿದ್ದೆ. ಧಾರವಾಡಕ್ಕೆ ಹೋಗುವ ಕೊನೆಯ ಬೇಂದ್ರೆ ಬಸ್ ಹತ್ತಿದೆ. ಇನ್ನೂ ರಾಣಿ ಚನ್ನಮ್ಮದಿಂದ ಬರುವ ಪ್ರಯಾಣಿಕರಿಗೆ ಬಸ್ ಕಾಯುತ್ತಾ ಇತ್ತು. ನಾನೋ ಕಿಡಕಿಯಿಂದ ಹೊರಗಡೆ ನೋಡೋದು , ನನ್ನ ಟಾಟಾ ಇಂಡಿಕಾಂ ಮೊಬೈಲ್ನಲ್ಲಿ ಸಮಯ ಎಷ್ಟಾಗಿದೆ ಎಂದು ನೋಡೋದು. ಹೀಗೆ ನೋಡುತ್ತಾ ನೋಡುತ್ತಾ ಏನೋ ಶಬ್ದ. ಏನಾಯ್ತು ಅಂತ ನೋಡಿದರೆ ಯಾರೋ ಹುಡುಗಿ ತನ್ನ ಬ್ಯಾಗನ್ನು ಮೇಲೆ ಬಸ್ಸಲ್ಲಿ ಎತ್ತಿ ಇಡಲು ತಡವರಿಸುತ್ತಿದ್ದಳು. ನಾನೋ ಹೋಗಿ ಬ್ಯಾಗ್ ಎತ್ತಿ ಮುಂದಿನ ಸೀಟ್ ಹತ್ತಿರ ಇಟ್ಟೆ. ಹಾಗೆ ಹುಡುಗಿ ನನ್ನ ನೋಡಿ ಸಿಹಿಯಾದ ಧ್ವನಿಯಲ್ಲಿ ಥ್ಯಾಂಕ್ಸ್ ಹೇಳಿದಾಗ ನಾನು ಅವಳ ಸುಂದರ ಕಣ್ಣ ಒಮ್ಮೆ ನೋಡಿದೆ.ನೋಡುತ್ತಾನೇ ಇರಬೇಕು ಅನ್ನುವಷ್ಟು ಸುಂದರ ಕಣ್ಣುಗಳು. ಏನು ಹೇಳ್ಬೇಕೋ ಅನ್ನುವಷ್ಟು ತಿಳಿಯದೆ ಪರವಾಗಿಲ್ಲ ಅಂತ ಮಾತ್ರ ಹೇಳಿದೆ. 

ಆಗಿನ್ನೂ ಯವ್ವನದ ರೆಕ್ಕೆ ಹಾರಲು ಸಿದ್ಧವಾದಂತೆ ಕಂಡಿತು. ಕಾಲೇಜು ಮುಗಿದು ಕೆಲಸ ಮಾಡುತ್ತಿದ್ದರಿಂದ ಕಾಲೇಜಿನಲ್ಲಿ ಇದ್ದ ಮುಗ್ಧತೆ ಮತ್ತು ಸಂಕೋಚ ಕೊಂಚ ಕಡಿಮೇನೇ ಆಗಿತ್ತು. ನನ್ನ ಯೋಚನಾ ಲಹರಿಗಳೇ ವಿಚಿತ್ರವಾಗಿದ್ದವು. ಇನ್ನೂ ನನ್ನ ನಿಲ್ದಾಣ ಬಂದಾಗ ಕೊಂಚ ತಿರುಗಿ ಅವಳ ಹತ್ರ ನೋಡಿದೆ. ಅವಳಿಗೇನು ಅರೀವಾಗಬೇಕು ನಾನು ಇಲ್ಲೇ ಇಳಿಯುವುದು ಎಂದು. ಗಾಂಧಿನಗರದಲ್ಲಿ ನಾನು ಇಳಿದಾಗ ಎಂತದೋ ಒಂದು ಕಸಿವಿಸಿ. ಕಾಲೇಜಿನಲ್ಲಿ ಇಷ್ಟವಾದ ಹುಡುಗೀಯರೆಲ್ಲ ನನಗಿಂತ ಉದ್ದ ಇದ್ದರು. ಇವಳೋ ನನಿಗಿಂತ ಸ್ವಲ್ಪ ಗಿಡ್ಡ ಇರಬಹುದು. ಎಂತಹ ಸುಂದರ ಕಣ್ಣುಗಳು ಅಂತ ಇನ್ನೊಮ್ಮೆ ಅವಳ ಕಣ್ಣುಗಳನ್ನೇ ನನ್ನ ಮನದ ಒಂದು ಕೋಣೆಯಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದೆ. ಸೀದಾ ನಮ್ಮ ಬಾಡಿಗೆ ಮನೆಯ ಹತ್ತಿರ ಹೋದಾಗ ಆಗಲೇ ನನ್ನ ಗೆಳೆಯ ಮಲಿಗಿದ್ದ.

ನಾನು ಮತ್ತು ಕಾಶಿ ಒಂದೇ ಕಂಪನಿಯಲ್ಲಿ ಕೆಲಸ ಮಾಡೋದು. ನಾವು ಕಾಲೇಜಿನಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು ಕೂಡ. ಆದಿ, ನಾನು ಮತ್ತು ಕಾಶಿ ಹೀಗೆ ಗೆಳೆತನ ಒಂದು ಕೊಂಡಿ ಇದ್ದಂತೆ. ಆದಿ ಅಂದರೆ ಅದೇ ಕಚೋರಿ ಗೆಳೆಯ. ಅವನ ಅಣ್ಣನೇ ನನ್ನ ಬಾಸ್. ಎಷ್ಟೋ ವಿಷಯದಲ್ಲಿ ಕಾಶಿ ಅಣ್ಣ ಇದ್ದ ಹಾಗೆ. ಜೀವನದಲ್ಲಿ ಎಷ್ಟೋ ವಿಷಯಗಳನ್ನು ಅವನಿಂದ ತಿಳಿದುಕೊಂಡಿದ್ದೆ. ಕಾಶಿ ಮಾತಾಡ್ತಾ ಇದ್ದರೆ ನಿಲ್ಲೋದೇ ಇಲ್ಲ. ಅವನು ನಾನು ಇನ್ನೂ ಚಿಕ್ಕವನು ಮತ್ತು ಹುಡುಗಿಯರ ವಿಷಯದಲ್ಲಿ ಮಾತಿನಲ್ಲಿ ಮಾತ್ರ ಅಂತಾನೇ ಹೇಳುತ್ತಿದ್ದ. ನಾನೋ ಅವನ ಪರಿಚಯದವಳ ಮೇಲೆ ಕವನ ಬರೆದಿದ್ದೆ. ಆ ಹುಡುಗಿ ಇವನನ್ನು ಅಣ್ಣ ಅಂತಾನೆ ಕರೀತಿದ್ದಳು. ಆದರೂ ಅವನಿಗೆ ನನ್ನ ಮೇಲೆ ಒಂದು ರೀತಿಯ ನಂಬಿಕೆ. ನನ್ನ ಪರೀದಿ ಮೀರಿ ಎಂದಿಗೂ ಹೊರಗಡೆ ಹೋಗಲ್ಲ ಅಂತಾನೇ ಅವನು ತಿಳಿದು ಕೊಂಡಿದ್ದ. ಮಾಡಿರುವ ತಪ್ಪನ್ನು ತಿದ್ದುಕೊಳ್ಳುವ ಚಾಕಚಕ್ಯತೆ ಇದೆ ಅಂತಾನೇ ಅವನು ಭಾವಿಸಿದ್ದ. ಆದರೂ ನಾನು ಹುಡುಗೀಯರ ವಿಷಯ ಅವನ ಹತ್ತಿರ ಹೇಳೋದಿಲ್ಲಾಗಿತ್ತು. ಯಾಕಂದ್ರೆ ನನ್ನ ಕಾಲು ಎಳೆಸ್ಕೊಳ್ಳಲು ನಾನು ಸಿದ್ದ ಇಲ್ಲಾಗಿತ್ತು.

ರಾತ್ರಿ ಇಡೀ ಅದೇ ಹುಡುಗಿಯ ಕಣ್ಣುಗಳು. ಬೆಳಗ್ಗೆ ಎದ್ದಾಗ ಎಲ್ಲವೂ ಮರೆತೇ ಹೋಗಿತ್ತು. ಬೆಳಗ್ಗಿನ ಸಮಯ ಒಮ್ಮೊಮ್ಮೆ ಹತ್ತಿರದಲ್ಲೇ ಇದ್ದ ಡಾಬಾದಲ್ಲಿ ಉಪಹಾರ. ಹಾಗೆ ಬೇಂದ್ರೆ ಬಸ್ ಹತ್ತಿ ಪಯಣ. ಒಮ್ಮೊಮ್ಮೆ ಶ್ರೀ ಬೈಕ್ ಅಲ್ಲಿ ಆಫೀಸಿಗೆ ಹೋಗೋದು ರೂಡಿ. ಅಂದು ಇಂದಿನ ಹಾಗೆ ಉಪಹಾರ ಮುಗಿಸಿ ಬೇಂದ್ರೆ ಬಸ್ ಹತ್ತಿದೆ. ಪೆನ್ ಪೇಪರ್ ಹೊರಗಡೆ ಇಟ್ಟು ಏನಾದ್ರೂ ಬರೆಯುವುದು ರೂಡಿ. ಎಸ್.ಡಿ.ಎಂ ಆಯುರ್ವೇದಿಕ್ ಕಾಲೇಜಿನ ಹುಡುಗೀಯರು , ಮೆಡಿಕಲ್ ಕಾಲೇಜಿನ ಹುಡುಗಿಯರು ಹಾಗೆ ಕೊನೆಗೆ ಬಿವಿಬಿ ಮತ್ತಿತರ ಕಾಲೇಜಿನ ಹುಡುಗಿಯರು ನೋಡಲು ನೂರು ಕಣ್ಣು ಸಾಲದು.

ಆಫೀಸಲ್ಲಿ ನನ್ನ ಸೀನಿಯರ್ ಕೆಲಸ ಬಿಟ್ಟು ಬೇರೇನೂ ಮಾತಾಡಲ್ಲ. ಕೋಡಿಂಗ್ ಚನ್ನಾಗಿಯೇ ಗೊತ್ತಿತ್ತು. ಹೊರಗಿನ ಜ್ಞಾನ ಅಷ್ಟಕ್ಕಷ್ಟೇ. ದುಡ್ಡು ತಿಂಗಳಿಗೆ ಸರಿಯಾಗಿ ಬರಬೇಕು. ಇಲ್ಲಾಂದರೆ ಅಂದು ಎಲ್ಲರ ಚಿಂದಿ ಚಿತ್ರಾನ್ನ. ನಾನೋ ಒಂತರಹ ಕುರೀನೇ. ಅದು ಅಂತಿಂತಲ್ಲ ಕುರಿ, ಬಲಿಗೆ ಕರೆದುಕೊಂಡು ಹೋಗುವ ಕುರಿ. ಸ್ನೇಹದ ಚಕ್ರವ್ಯೂಹದಲ್ಲಿ ಸಿಕ್ಕಿ ಏನನ್ನೂ ಹೇಳಲಾರೆ. ತಿಂಗಳಿಗೆ ಸರಿಯಾಗಿ ಸಂಬಳ ಬರೋದಿರಲಿ. ಬಾಡಿಗೆ, ಬಸ್ಸು ಮತ್ತು ಊಟಕ್ಕೆ ಸಿಕ್ಕಿದರೆ ಸಾಕಿತ್ತು. ಆದರೂ ಕಲಿಯಬೇಕೆಂಬ ಹಂಬಲ ನನ್ನನ್ನು ಒಂದು ರೀತಿಯಲ್ಲಿ ತಾಳ್ಮೆಯನ್ನು ಕಲಿಸಿತ್ತು. ಇಷ್ಟರ ನಡುವೆ ಆಫೀಸಿನಲ್ಲಿ ಇದ್ದ ಗೆಳೆಯರ ಜೊತೆ ಊಟದ ಸಮಯ ಮಾತ್ರ ಒಂದು ಮಜಾ. ನನ್ನ ಗುರುಗಳ ಜೊತೆ ಊಟಕ್ಕೆ ಹೋದರೆ ಬರೀ ಕೆಲಸದ ಬಗ್ಗೆನೇ ಮಾತು.

ಹೆಚ್ಚಾಗಿ ಆಫೀಸಿನಿಂದ ಲೇಟ್ ಆಗೇ ಹೋಗೋದು. ಕೆಲಸ ಒಂದು ರೀತಿಯ ಹುಚ್ಚು ತರಹ. ಅವತ್ತೇ ಹೇಗೋ ಬೇಗ ಹೋದೆ. ಮಾಮೂಲು ಬೇಂದ್ರೆ ಬಸ್ ಹತ್ತಿದೆ. ಜಾಗ ಕಾಲಿ ಇಲ್ಲದ್ದರಿಂದ ನಿಂತು ಕೊಂಡು ಹೋದೆ. ಮುಂದಿನ ಯಾವುದೋ ನಿಲ್ದಾಣದಲ್ಲಿ ನಾನು ನಿಂತುಕೊಂಡಿದ್ದ ಜಾಗದ ಪಕ್ಕದಲ್ಲಿ ಕುಳಿತುಕೊಂಡಿದ್ದ ಹೆಂಗಸೊಬ್ಬರು ಇಳಿದರು. ನಾನು ಕಾಲಿ ಜಾಗದ ಪಕ್ಕದಲ್ಲಿ ಹುಡುಗಿ ಇದ್ದದ್ದರಿಂದ ಸುಮ್ಮನೆ ನಿಂತೇ ಇದ್ದೆ. ಆಗ ಯಾರೋ ಕರೆದಂತೆ ಆಗಿ ತಿರುಗಿದೆ. ಆ ಹುಡುಗಿ ಬೇರೆ ಯಾರೂ ಅಲ್ಲ ಅದೇ ಬ್ಯಾಗ್ ಹುಡುಗಿ. ಮತ್ತೆ ಅದೇ ಕಣ್ಣು. ಅವರ ನಗುನೂ ನೋಡಿದೆ. ಎಂತಹ ನಗು! ಅಲ್ಲೇ ಬಿದ್ದು ಬೀಳುವುದೊಂದೇ ಬಾಕಿ. 

ಹಾಗೆ ನಾಚುತ್ತ ನಾನು ಅವಳ ಪಕ್ಕದಲ್ಲಿ ಕುಳಿತೆ. ಧಾರವಾಡ ಬರೋದು ತುಂಬಾ ಹೊತ್ತಿದೆ. ಏನು ಮಾತಾಡೋದು ಅಂತ ತಿಳಿಯದು. ಈ ಸಂಜೆ ತುಂಬಾ ದೊಡ್ಡ ಸಂಜೆಯಾದಂತೆ ಕಂಡಿತು. ಎಂತಹ ಹುಚ್ಚ ನಾನು ಥ್ಯಾಂಕ್ಸ್ ಕೂಡ ಹೇಳಲಿಲ್ಲ. ತುಂಬಾ ಥ್ಯಾಂಕ್ಸ್ ಅಂತ ಅವಳನ್ನು ನೋಡಿದೆ. ಮತ್ತದೇ ಕಿರು ನಗೆ. ಆ ಕಣ್ಣುಗಳನ್ನು ನೋಡಲಾಗದೆ ಕಣ್ಣು ಅತ್ತಿತ್ತ ಓಡಲಾರಂಭಿಸಿತು. ಆಗ ಅವರ ಮೃದು ಧ್ವನಿಯಲ್ಲಿ ಕೇಳಿದಳು, ಎಲ್ಲಿ ಕೆಲಸ ಮಾಡುವುದು ನೀವು. ಅಲ್ಲಿಂದ ಶುರುವಾಯಿತು ನೋಡಿ ಮಾತುಕತೆ.  ನಾನು ದುಷ್ಯಂತ ಮತ್ತು ಅವಳು ಶಕುಂತಲೆ, ಬಸ್ಸಿನಲ್ಲಿ ಇರುವವರೆಲ್ಲ ಗಂಧರ್ವ  ಲೋಕದವರು. 


ಮುಂದುವರೆಯುವುದು..........................
















ಅಮ್ಮ

 ಅಮ್ಮ ಎನ್ನುವ ಆ ಹೆಸರಲ್ಲಿ ಏನಿದೆಯೋ ?

ಬದುಕೇ ಆ ಎರಡಕ್ಷರದಲ್ಲಿ ಅಡಗಿದ ಭಾವವೋ,

ಮನದಾಳದಿಂದ ಕರೆಯುತ್ತಿದ್ದ ಆ ಧ್ವನಿಯಲ್ಲಿ

ಹುದುಗಿರುವ ಎಂತಹ ಶಕ್ತಿಯೋ,


ಕೈಹಿಡಿದು ನಡೆಸಿದ ಅಕ್ಕರೆಯ ಗಳಿಗೆಯೋ,

ತಿದ್ದಿ ಕಲಿಸಿದ ಆ ಕಪ್ಪು ಬಿಳುಪು ಅಕ್ಷರವೋ,

ಉಣಬಡಿಸಲು ತೋರುತ್ತಿದ್ದ ಚಂದ್ರಮನ ಮೊಗದಲ್ಲಿ,

ಅಮ್ಮನ ಕಾಣುತ್ತಿದ್ದ ಆ ಕ್ಷಣಮಾತ್ರದ ಸುಖವೋ.


ಆಟ ಆಡಿ ಬಂದಾಗ

ಸಿಗುತ್ತಿದ್ದ ಅಮ್ಮನ ಕೈ ತುತ್ತು,

ಓದಲು ಕುಳಿತಾಗ

ಮಗನ ಬಗ್ಗೆ ಇದ್ದ ಆ ದೃಡ ನಂಬಿಕೆಯೋ,


ದೂರ ದೂರ ಹೋದರೂ

ರಕ್ಷಿಸುತ್ತಿದ್ದ ಅಮ್ಮನ ಶ್ರೀ ರಕ್ಷೆಯೋ,

ದೇವರು ಮರೆತರೂ

ಬೆಂಬಿಡದೆ ಕಾಯುತ್ತಿದ್ದ ಅಮ್ಮನ ಶ್ರೀ ರಕ್ಷೆಯೋ .


ಮಗನ ಸ್ವತಂತ್ರ ಬದುಕಿನ

ನಿಜ ಕಾರಣಕರ್ತೆಯು,

ದೇವರೇ ಇಲ್ಲದ ಈ ಜಗದಲಿ

ನಿಜ ದೇವತೆಯೋ


ಅಮ್ಮ ನೀ ನನ್ನೋಂದಿಗೆ ಇದ್ದರೆ ಸಾಕು,

ಬದುಕೇ ಪಾವನವು

ಅಮ್ಮ ನೀ ನನ್ನೋಂದಿಗೆ ಇದ್ದರೆ ಸಾಕು,

ನನ್ನ ಬದುಕಿಗೇ ಅರ್ಥವೋ.


ಅಮ್ಮ ಎನ್ನುವ ಹೆಸರಲ್ಲಿ

ಏನಿದೆ ಎಂದು ಕೇಳದಿರು,

ಅದೇ ಶಕ್ತಿಯು, ಅದೇ ಮೋಕ್ಷವು,

ಅದೇ ಜೀವನದ ಅರ್ಥವು.


ಪ್ರೀತಿ ಎಂಬ ಕಡಲಲಿ

ಪ್ರೀತಿ  ಎಂಬ  ಕಡಲಲಿ
ತೇಲಿ ಹೋದರೇನು ?
ಬರುವೆನಲ್ಲಾ  ದಡಕ್ಕೆ 
ನುಚ್ಚು ನೂರಾಗಿ ನಾನು.

ನಿನ್ನ ಪ್ರೀತಿಯಿಂದ ದೂರ,
ಹೋಗಲೆಂದು ನಾನು
ಈಜಿ  ಈಜಿ ಹೋದರೆ
ಆಳಕ್ಕೆ ಕರೆದುಕೊಳ್ಳುತ್ತಿರುವುದು  ಏನು ?

ಸುಂದರ ಕಡಲು
ಚಂದದ ಸೂರ್ಯನ
ಮುಟ್ಟುವ ಧೈರ್ಯವೇಕೆ?
ಬೂದಿಯೋ  ಚೂರೋ  ಏನೆಂದು ಕಾಣೆ.

ಜಾತಿ  ಎಂಬ  ವಿಷದಲ್ಲಿ
ಧರ್ಮವೆಂಬ  ಕಳೆದು  ಹೋದ  ದಾರಿಯಲಿ,
ನಿನ್ನ ನೋಟವೇಕೆ
ನನ್ನ  ಕುರುಡು  ಮಾಡಿಸಿತು ?

ನಿನ್ನ  ಕೋಪದಲ್ಲಿ
ಸೂರ್ಯನ ನಾನು ಕಂಡೆ.
ನಿನ್ನ ಪ್ರೀತಿಯಲ್ಲಿ 
ಸುಂದರ ಕಡಲನು ಕಂಡೆ.

ಎಷ್ಟು ಆಳವೆಂದು  ತಿಳಿಯಲು,
ಎಷ್ಟು ತಾಪವೆಂದು ಅನುಭವಿಸಲು,
ಇಳಿದು ಜಿಗಿದು ಇಳಿದರೆ
ಹೊರಬರಲು ದಾರಿಯೇನು ?

ಸಮಾಜವೆಂಬ ಕಣ್ಣು
ಕಟ್ಟುಪಾಡು ಎಂಬ ಬೇಲಿ,
ಹರಿದು ಹಾಕಲಾರದ ಕೈ,
ಸುಳಿಯಲ್ಲಿ ಸಿಕ್ಕಿರುವ  ಕಾಲು.

ಕೊನೆಗೂ ಒಡೆದು ಹೊರಬರಲು,
ಒಡೆದು ಹೋದ ಮನಸ್ಸಿಗೆ,
ಚೂರು ಚೂರಾದ ಹೃದಯಕ್ಕೆ,
ಭರವಸೆಯೇ ಮುಲಾಮು.

ಹಿಡಿದು ಬಂದ ದಾರಿ
ನೋವಿನಿಂದ ನಡೆಸಿದ ಬದುಕು,
ನನ್ನ ನಾ ಕಂಡುಕೊಂಡ  ಬಗೆ,
ಬೆಚ್ಚಿ  ಬೀಳಿಸುವ  ಕಥೆ,

ಹೇಳಿದರೆ ಕಥೆ ಮುಗಿಯದು.
ಮುಗಿದರೆ ಅದು ಕಟ್ಟ ಕಥೆಯು
ದಡಕ್ಕೆ ಸೇರಿದ್ದೇ ಒಂದು ಸಾಹಸಗಾಥೆ. 
ನುಚ್ಚು ನೂರಾದ ಕನಸ್ಸೇ ಒಂದು ಜೀವನಗಾಥೆ.