ಮನ ಬಿಚ್ಚಿ ಮಾತಾಡು

9:47 AM 1 Comments A+ a-

ಮನ   ಬಿಚ್ಚಿ  ಮಾತಾಡು
ಏನೇನೂ  ಇಡಬೇಡ ,
ಹೃದಯದಿಂದ  ಹೊರಬರಲಿ
ಎದೆಯಾಳದ  ಗುಟ್ಟೊಂದ.
 
ಕಣ್ಣುಗಳು  ನೋಡ್ತಾವ 
ತುಟಿ ನಡುವಿನ  ನಗುವನ್ನ,
ತೆರೆಯಲೇಕೆ ಆಗ್ತಿಲ್ಲ 
 ತುಟಿ  ಮೇಲಿನ  ಮಾತನ್ನ .
 
ನಿನ್ನನ್ನು  ನೋಡ್ತಾನೆ
ದಿನಗಳನ್ನು  ಕಳೆದ್ಯಾನ ,
ಕಾಯುತ  ಕಾಯುತಲಿ 
ಜೀವನವೇ  ಮರೆತ್ಯಾನ.
 
ನನ್ನ  ಹತ್ತಿರ  ಆಗೋಲ್ಲ 
ಅನ್ನೋದು  ಏನಿಲ್ಲ ,
ಪ್ರೀತಿಯ ವಿಷಯದಾಗ 
ಏನೇನೂ  ಆಗಲ್ಲ .
 
ಹೇಳಲೇ  ಬೇಕೆಂಬ 
ಕೊನೆ  ಗಳಿಗೆಯ  ಹಂಬಲವು ,
ಇಡೇರುವ ಲಕ್ಷಣವು
ಕಾಣೋದು ಯಾವಾಗ.

1 comments:

Write comments
srikant
AUTHOR
March 4, 2012 at 10:15 PM delete

nimm pritena mucidabedi,bcz priti horagidru koyuthe olagidru koyuthe

Reply
avatar