ದೂರ ಹೋಗದಿರು ನನ್ನ ಬಿಟ್ಟು

9:31 AM 0 Comments A+ a-

ದೂರ ಹೋಗದಿರು ನನ್ನ ಬಿಟ್ಟು
ಮನದೊಡತಿಯೇ ನೀ ನನ್ನ ಬಿಟ್ಟು

ನೀ ಬರುವೆ ಎಂದು
ನಾ ಕಾಯುತಲಿದ್ದೆ ,
ಆ ಒಂದು ಗಳಿಗೆಗೆ
ಸಮಯದ ಅರಿವೆಯೇ ಇಲ್ಲದಂತೆ .

ನಿನ್ನ ಒಂದು ನಗುವ
ನಾ ಅಹ್ಲಾದಿಸುತ್ತಿದ್ದೆ .
ಆ ಒಂದು ವಿಸ್ಮಯಕ್ಕೆ
ಈ ಜಗವೇ ನನ್ನದೆನ್ನುವಂತೆ .

ಮನದಾಳದ ಮಾತು
ನಾ ಹೊರಗೆಡಹ ಬೇಕೆನಿಸುತ್ತಿದೆ ,
ನೀನೊಬ್ಬಳೆ ಎದುರಿಗೆ ಬಂದರೂ
ಮಾತೆ ಹೊರಬರದಂತಿದೆ .

ನಿನ್ನ ನೋಡದ ದಿನ
ಜೀವ ಹೋದಂತೆ ಅನಿಸುತ್ತಿದೆ  ,
ಜೀವ ಹೋದರೂ ಹೋಗಲಿ
ನಿನ್ನ ಒಳಿತಿಗಾಗಿ ಹೋಗಲೆಂಬಂತೆ .

ಪ್ರತಿ ಕ್ಷಣ ಪ್ರತಿ ಉಸಿರು
ನಿನಗೋಸ್ಕರ ಮೀಸಲಿಟ್ಟಿರುವೆ ,
ನಿನ್ನ ಕವಚವಾಗಿ
ಹೊರಪದರವೆಂಬಂತೆ .

ನಿನ್ನ ನಗುವಿಗೆ ಕಾರಣ
ತಡವಾದರೂ ನಾನಾಗದಿದ್ದಲ್ಲಿ ,
ನಾನಾಗಿಯೇ ಹೋಗುವೆ
ಗೆಳತಿ ನಿನ್ನ ತೊರೆದೆಂಬಂತೆ.

ದೂರ ಹೋಗದಿರು ನನ್ನ ಬಿಟ್ಟು

ಮನದೊಡತಿಯೇ ನೀ ನನ್ನ ಬಿಟ್ಟು .