ಮರೆಯದಿರು ನೀ ಓ ಗೆಳೆಯ

10:52 AM 0 Comments A+ a-

I wrote it on engineers day.....

Dedicated to the man who dedicated his life for the nation and u cannot find a single field where he has not worked.......

The father of modern India ....
bharata ratna Sir M Visheshwarayya


ಕಡು ಕತ್ತಲದು
ಬೆಂಬಿಡದೆ ಸುತ್ತುತ್ತಿಹುದು
ಬೆಳಕಿನೆಡೆಗೆ ಕಣ್ಣಾಡಿಸುತ
ಜವ ಬರುವ ಸಮಯ ಸಮೀಪಿಸಲು
ಬೆಳಕಿನ ಹಣತೆಯ ನೀಡಿ
ಮರೆಯಾದ ಆ ಧಾರ್ಶನಿಕನ
ಮರೆಯದಿರು ನೀ ಓ ಗೆಳೆಯ.

ಜ್ಞಾನವೆಂಬ ಅರಗಿಣಿಯ
ಹುದುಕಾದುತ ದಿನ ಕಳೆಯಲು
ಬೆವರಿನ ಹನಿಗಳು
ಮುತ್ತಿನಂತೆ ಉದುರುತಿರಲು
ಜ್ಞಾನ ದೇಗುಲವ ನಿರ್ಮಿಸಿ
ಜ್ಞಾನ ದೇವತೆಯಾದ ಆ ಜ್ಞಾನಿಯ
ಮರೆಯದಿರು ನೀ ಓ ಗೆಳೆಯ

ಭೂಮಿಯನ್ನು ಉಳುಮೆಗಯ್ಯಲು
ಜಲ ದೇವನು ದೂರನಾಗಿ
ಭಂಜರು ಭೂಮಿಯ ಭಾರವೆತ್ತಿ
ತಣ್ಣೀರ ಬಟ್ಟೆಯಲಿರುತಿರಲು
ಭೂಮಿಗೆ ಜಲವ ನೀಡಿ
ಜಲರತ್ನಕ್ಕೂ ಮಿಗಿಲಾದ ಆ ಭಾರತ ರತ್ನನ
ಮರೆಯದಿರು ನೀ ಓ ಗೆಳೆಯ

ಅವರ ಸೇವೆ ತಲುಪದ ಮಣ್ಣಿಲ್ಲ
ವಯಸ್ಸಾದರೂ ಅವರ ಚೈತನ್ಯ ಕಳೆಗುಂದಲಿಲ್ಲ
ಜಲಶಕ್ತಿಯ ಮನಗಂಡ
ವಿಧ್ಯಾಭಾರತಿಯ ಸೇವೆಯಲ್ಲಿ
ಭಾರತ ಮಾತೆಯ ಮಡಿಲಲ್ಲಿ ಸಾವನ್ನಪ್ಪಿದ
ಆ ಅಮರ ಜೀವಿಯ
ಮರೆಯದಿರು ನೀ ಓ ಗೆಳೆಯ .

ಮತ್ತೊಮ್ಮೆ ಹುಟ್ಟಿ ಬಾ ನನ್ನೊಡೆಯ

11:39 AM 4 Comments A+ a-

I saw a cut out of Dr Rajkumar near Rajajinagar. In the top most corner one caption was there "Mattomme huttibaa". Seeing that I couldnot stop myself and I wrote this poem.A tribute to namma nimmellara annavru..

ಮತ್ತೊಮ್ಮೆ ಹುಟ್ಟಿ ಬಾ ನನ್ನೊಡೆಯ
ಕನ್ನಡದ ತಿಲಕವ ಮೇಲೆತ್ತಲು

ಕನ್ನಡದ ನಾಡಿನಲ್ಲಿ
ಕನ್ನಡದ ಕಂಪನ್ನು ಪಸರಿಸಲು ,
ಗಂಧದ ಗುಡಿಯ ಸಿರಿಯನ್ನು
ವಿಶ್ವದುದ್ದಕ್ಕೂ ಸಾರಲು ,
ಬಭ್ರುವಾಹನನ ರೂಪದಲ್ಲಿ
ಐತಿಹಾಸಿಕ ಪ್ರಜ್ಞೆ ಮೂಡಿಸಲು,
ಮತ್ತೊಮ್ಮೆ ಹುಟ್ಟಿ ಬಾ ನನ್ನೊಡೆಯ
ಕನ್ನಡದ ತಿಲಕವ ಮೇಲೆತ್ತಲು.

ಬಂಗಾರದ ಮನುಷ್ಯನು ನೀನು,
ಕನ್ನಡದ ಕಣ್ಮಣಿಯು ನೀನು ,
ಗುರು ರಾಘವೇಂದ್ರನ ಭಕ್ತನು ನೀನು,
ಕನ್ನಡ ಸಾಮ್ರಾಜ್ಯದ ವರ ನಟನು ನೀನು,
ಶಬ್ದವೇಧಿಯ ಬಾಣದಿ
ಕನ್ನಡ ಕುಲವ ಉದ್ಧರಿಸಲು ,
ಮತ್ತೊಮ್ಮೆ ಹುಟ್ಟಿ ಬಾ ನನ್ನೊಡೆಯ
ಕನ್ನಡದ ತಿಲಕವ ಮೇಲೆತ್ತಲು

ಕನ್ನಡವೇ ನಿನ್ನ ಧೈವ,
ಕನ್ನಡವೇ ನಿನ್ನುಸಿರು,
ಕನ್ನಡಮ್ಮನ ಮುದ್ದಿನ ಮಗ,
ಕನ್ನಡಿಗರ ಆರಾಧ್ಯ ಧೈವ ,
ಅಭಿಮಾನಿ ದೇವರುಗಳ ಕಣ್ಣೋರಿಸಲು,
ಗಾನ ಗಂಧರ್ವನ ರೂಪದಲ್ಲಿ
ಮತ್ತೊಮ್ಮೆ ಹುಟ್ಟಿ ಬಾ ನನ್ನೊಡೆಯ
ಕನ್ನಡದ ತಿಲಕವ ಮೇಲೆತ್ತಲು.

ಓ ಗೆಳತಿ

11:40 AM 1 Comments A+ a-

ಜಯದಲ್ಲಿ ನೋಡುವೆ ಓ ಗೆಳತಿ ನಿನ್ನನ್ನು ,
ಜಯದ ಹಾದಿಯಲ್ಲಿ ಹೋಗುವಾಗ,
ಮನದಲ್ಲಿ ನಿನ್ನಯ ಪೂಜೆಯ ಮಾಡುವೆನು,
ಹೃದಯದ ಕದ ತಟ್ಟಿ ಬಾಚುವೆನು ನೆನಪನ್ನು.

ಸೋಲಿನಲ್ಲಿ ಜಯವನ್ನು ಕಹಿಯಲ್ಲಿ ಸಿಹಿಯನ್ನು
ಕಾಣುವಂತೆ ಮಾಡಿರುವೆ ಓ ಗೆಳತಿ, ನಿನ್ನಯ
ಆಸರೆಯಲ್ಲಿ ಮಣ್ಣೂ ಹೊನ್ನಾಯಿತು,ಕಲ್ಲೂ
ಜೇನಾಯಿತು, ಬದುಕೂ ಕನಸಾಯಿತು.

ಸಕ್ಕರೆ ಪಾಕದಲ್ಲಿ ಲವಣವನ್ನು ಬಯಸಿದಂತೆ ,
ಕಲ್ಲಿನ ಮೂರ್ತಿಯಲ್ಲಿ ದೇವರನ್ನು ಕಾಣುವಂತೆ,
ಸಭ್ಯತಾ ಮೂರ್ತಿಯಲ್ಲಿ ಪ್ರೀತಿಯಲ್ಲಿ ಕಂಡೆನು,
ಹೋಳಾದ ಜೀವನವನ್ನು ಸರಿಪದಿಸದಾದೆನು.

ನಿನ್ನಯ ಚಿತ್ರಣವನ್ನು ಮನಸ್ಸಲ್ಲಿ ನೆಲೆ ಮಾಡಿ,
ಮಹತ್ವಾಕಾಂಕ್ಷೆಯನ್ನು ಹೊತ್ತು ಸಾಗಿಹೆನು,
ನಿನ್ನನ್ನೇ ಸ್ಪೂರ್ತಿಯನ್ನಾಗಿಸಿ, ಜೀವನಾಡಿಯನ್ನಾಗಿಸಿ
ಬಾಹ್ಯಾಕಾಶ ಜೀವನದಲ್ಲಿ ಸಾಗಿಹೆನು,
ಓ ಗೆಳತಿ ನಿನ್ನನ್ನೇ ಗುರುವನ್ನಾಗಿಸಿ ಸಾಗಿಹೆನು.