ಮನಸನು ತಿಳಿಯದ ಒಂದು ಮಾತು
ಈ ನನ್ನ ಮನದಲಿ ಏನೋ
ತಿಳಿಯದ ಒಂದು ಮಾತು
ನೀ ಕೇಳದೆ ಹೋದರೆ ಹೇಗೆ
ಹನಿಗವನವು ಆಗದು ಈ ಮಾತೇ.
ಮುಸ್ಸಂಜೆಯ ತಂಗಾಳಿಯ
ಆಗುಂಬೆಯ ಮಳೆಯಲಿ ಏನೋ
ದಾರಿ ತೋರದ ಹಾಗೆಯೇ
ಕೇಳದೆ ಮರೆಯಾಗಿಹುದು.
ಮರವಂತೆಯ ತೀರದ ಕಡಲಲಿ
ಮರೆಯಾದ ಆ ತಂಗಾಳಿ
ಬಿಸಿಲಿನ ಬೇಗೆಯನ್ನು ತಣಿಸಲು
ಮರು ರೂಪವ ತಾಳಿತೋ ಏನು.
ಹಿಮದ ಶಿಖರವ ಏರಿ
ನಿನ್ನಿಂದ ದೂರ ಹೋದರೂ
ಸಹ್ಯಾದ್ರಿಯ ನೆನಪು ಮರು ಕಾಣಿಸಲು
ನಮ್ಮೊರಿನ ನೆನಪೇ ಮಧುರವು.
ಗುಜರಾತಿನ ಮರು ಭೂಮಿಯಲಿ
ನಿಶ್ಯಬ್ಧಕೆ ನಿಶ್ಯಬ್ಧವು
ನನ್ನ ತೇಲಿ ಬಿಡುವಂತೆ ಮಾಡಲು
ನಿನ್ನ ಮಧುರ ರಾಗವು ನನ್ನ ತಾಕಲು .
ಎಲ್ಲೋರದ ಗುಹೆಗಳಲಿ
ಶಿಲ್ಪಕಲೆಯಲ್ಲೇ ಅದ್ಭುತವು
ಕಂಡರಿಯದ ಅಚ್ಚರಿಯಲ್ಲೂ
ಇಕ್ಕೇರಿಯ ನಂದಿಯು ನೆನಪಾಗುವುದೇ .
ಓ ಮನಸೇ ನನ್ನೊಳಗಿನ ಮನಸೇ
ನಿನ್ನ ಹಿಡಿಯುವುದು ಹೇಗೋ ತಿಳಿಯದು
ಪ್ರೀತಿಸುವ ಹೃದಯದಲಿ ಮಾತ್ರ
ನಿನ್ನ ಹೆಜ್ಜಯ ಗುರುತನು ಇಡುವೆ.
ಪ್ರೀತಿಯ ಸಿಗದೇ ಹೋದ ಕ್ಷಣ
ಇಳಿ ಪಾತಾಳಕ್ಕೆ ನನ್ನ ತಳ್ಳಿ
ಬಲು ಎತ್ತರಕ್ಕೆ ನನ್ನ ಕರೆದು
ನನ್ನ ಜೀವಕ್ಕೆ ಹೊಸ ದಾರಿ ತೋರಿಸುವೆ.
ಈ ನನ್ನ ಮನದಲಿ ಏನೋ
ತಿಳಿಯದ ಒಂದು ಮಾತು
ನಾ ಕೇಳದೆ ಹೋದರೆ ಹೇಗೆ
ನನ್ನ ಜೀವನವೇ ನಡಿಯದು.
- ಸಂತೋಷ ಬಿ ಜೆ
ತಿಳಿಯದ ಒಂದು ಮಾತು
ನೀ ಕೇಳದೆ ಹೋದರೆ ಹೇಗೆ
ಹನಿಗವನವು ಆಗದು ಈ ಮಾತೇ.
ಮುಸ್ಸಂಜೆಯ ತಂಗಾಳಿಯ
ಆಗುಂಬೆಯ ಮಳೆಯಲಿ ಏನೋ
ದಾರಿ ತೋರದ ಹಾಗೆಯೇ
ಕೇಳದೆ ಮರೆಯಾಗಿಹುದು.
ಮರವಂತೆಯ ತೀರದ ಕಡಲಲಿ
ಮರೆಯಾದ ಆ ತಂಗಾಳಿ
ಬಿಸಿಲಿನ ಬೇಗೆಯನ್ನು ತಣಿಸಲು
ಮರು ರೂಪವ ತಾಳಿತೋ ಏನು.
ಹಿಮದ ಶಿಖರವ ಏರಿ
ನಿನ್ನಿಂದ ದೂರ ಹೋದರೂ
ಸಹ್ಯಾದ್ರಿಯ ನೆನಪು ಮರು ಕಾಣಿಸಲು
ನಮ್ಮೊರಿನ ನೆನಪೇ ಮಧುರವು.
ಗುಜರಾತಿನ ಮರು ಭೂಮಿಯಲಿ
ನಿಶ್ಯಬ್ಧಕೆ ನಿಶ್ಯಬ್ಧವು
ನನ್ನ ತೇಲಿ ಬಿಡುವಂತೆ ಮಾಡಲು
ನಿನ್ನ ಮಧುರ ರಾಗವು ನನ್ನ ತಾಕಲು .
ಎಲ್ಲೋರದ ಗುಹೆಗಳಲಿ
ಶಿಲ್ಪಕಲೆಯಲ್ಲೇ ಅದ್ಭುತವು
ಕಂಡರಿಯದ ಅಚ್ಚರಿಯಲ್ಲೂ
ಇಕ್ಕೇರಿಯ ನಂದಿಯು ನೆನಪಾಗುವುದೇ .
ಓ ಮನಸೇ ನನ್ನೊಳಗಿನ ಮನಸೇ
ನಿನ್ನ ಹಿಡಿಯುವುದು ಹೇಗೋ ತಿಳಿಯದು
ಪ್ರೀತಿಸುವ ಹೃದಯದಲಿ ಮಾತ್ರ
ನಿನ್ನ ಹೆಜ್ಜಯ ಗುರುತನು ಇಡುವೆ.
ಪ್ರೀತಿಯ ಸಿಗದೇ ಹೋದ ಕ್ಷಣ
ಇಳಿ ಪಾತಾಳಕ್ಕೆ ನನ್ನ ತಳ್ಳಿ
ಬಲು ಎತ್ತರಕ್ಕೆ ನನ್ನ ಕರೆದು
ನನ್ನ ಜೀವಕ್ಕೆ ಹೊಸ ದಾರಿ ತೋರಿಸುವೆ.
ಈ ನನ್ನ ಮನದಲಿ ಏನೋ
ತಿಳಿಯದ ಒಂದು ಮಾತು
ನಾ ಕೇಳದೆ ಹೋದರೆ ಹೇಗೆ
ನನ್ನ ಜೀವನವೇ ನಡಿಯದು.
- ಸಂತೋಷ ಬಿ ಜೆ