ಹಾಗೆ ಒಂದು ಕವನ ಪಡುಬಿದ್ರೆಯ ತೀರದಲ್ಲಿ
ಕಡಲ ತೀರದಲಿ
ರಬಸದ ಅಲೆಯಲ್ಲಿ
ಕೊಚ್ಚಿ ಹೋಗದು ಯಾಕೆ
ಮನಸ್ಸಿನ ದುಗುಡವೇ ?
ಹೆಜ್ಜೆಗೆ ಹೆಜ್ಜೆಯ ಹಾಕಿ
ನನ್ನ ದಡಕ್ಕೆ ಸೇರಿಸಿ
ಅಲೆಯಂತೆ ನೀನು
ಹೊರಡುವೆ ಏಕೆ ?
ಸನಿಹ ಬಂದು ನೀನು
ನನ್ನ ಕೈ ಹಿಡಿದು ನೀನು
ಸ್ನೇಹದ ಬಂದನದಲ್ಲಿ
ಬಂದಿಸಿದೆ ಏಕೆ ?
ಬಿಸಿಯಾದ ಈ
ಗಾಳಿಯು ನನ್ನ
ತಂಪಾದ ಈ
ಮನಸ್ಸಿಗೆ ಸೋಕಿ
ನನ್ನ ಹೃದಯದಲಿ
ಪಲ್ಲಕ್ಕಿಯ ಏರಿಸಿ,
ಕನಸುಗಳಿಗೆ ನೀ
ಮೆಟ್ಟಿಲ ಜೋಡಿಸಿ,
ಸೂರ್ಯನು ಜಾರಲು
ಕತ್ತಲು ಆವರಿಸಿದಂತೆ
ನನ್ನ ನೀ
ಬಿಟ್ಟು ಹೋಗುವೆ ಏಕೆ ?
ಕಡಲ ತೀರದಲ್ಲಿ
ನಿನ್ನ ನೆನಪುಗಳಲ್ಲೇ
ಕಣ್ಣೀರಿನ ಧಾರೆಯಲ್ಲಿ
ಮುಳುಗಿಸುವೆ ಏಕೆ ?
ಸ್ನೇಹದ ಸಿಂಚನ
ಮೆರೆತೆಯಾ ಏಕೆ ?
ರಬಸದ ಅಲೆಯಲ್ಲಿ
ಕೊಚ್ಚಿ ಹೋಗದು ಯಾಕೆ
ಮನಸ್ಸಿನ ದುಗುಡವೇ ?
ಹೆಜ್ಜೆಗೆ ಹೆಜ್ಜೆಯ ಹಾಕಿ
ನನ್ನ ದಡಕ್ಕೆ ಸೇರಿಸಿ
ಅಲೆಯಂತೆ ನೀನು
ಹೊರಡುವೆ ಏಕೆ ?
ಸನಿಹ ಬಂದು ನೀನು
ನನ್ನ ಕೈ ಹಿಡಿದು ನೀನು
ಸ್ನೇಹದ ಬಂದನದಲ್ಲಿ
ಬಂದಿಸಿದೆ ಏಕೆ ?
ಬಿಸಿಯಾದ ಈ
ಗಾಳಿಯು ನನ್ನ
ತಂಪಾದ ಈ
ಮನಸ್ಸಿಗೆ ಸೋಕಿ
ನನ್ನ ಹೃದಯದಲಿ
ಪಲ್ಲಕ್ಕಿಯ ಏರಿಸಿ,
ಕನಸುಗಳಿಗೆ ನೀ
ಮೆಟ್ಟಿಲ ಜೋಡಿಸಿ,
ಸೂರ್ಯನು ಜಾರಲು
ಕತ್ತಲು ಆವರಿಸಿದಂತೆ
ನನ್ನ ನೀ
ಬಿಟ್ಟು ಹೋಗುವೆ ಏಕೆ ?
ಕಡಲ ತೀರದಲ್ಲಿ
ನಿನ್ನ ನೆನಪುಗಳಲ್ಲೇ
ಕಣ್ಣೀರಿನ ಧಾರೆಯಲ್ಲಿ
ಮುಳುಗಿಸುವೆ ಏಕೆ ?
ಸ್ನೇಹದ ಸಿಂಚನ
ಮೆರೆತೆಯಾ ಏಕೆ ?