ಕತ್ತಲಲ್ಲ ಇದು, ಅಜ್ಞಾನದ ಮೆಟ್ಟಿಲು.

1:46 AM 0 Comments A+ a-

ಕತ್ತಲಲ್ಲ ಇದು
ಅಜ್ಞಾನದ ಮೆಟ್ಟಿಲು.
ನಮ್ಮ ಸಿದ್ದರಾಮಯ್ಯನ
ನಿದ್ರಾ ಸಮಯದ ಭೋಗದ ಮತ್ತಿದು.

ಅನಂತನ ಅವಾಂತರವೋ ,
ಯಡ್ಡಿಗೆ ಯಡ್ಡಿಯೋ ,
ಇವರ ಮನೆಯಲ್ಲಿ ಬೆಳಕಿರಲು ,
ರಾಜ್ಯದಲ್ಲಿ ಕತ್ತಲು.

 ರೆಡ್ಡಿಯ ದುಡ್ಡಿಗೆ
ಮುಳುಗಿ ಹೋದ ಬಳ್ಳಾರಿಯು,
ಇನ್ನೂ ಯಾವಾಗ ಮುಗಿಯುವುದು,
ಶ್ರೀರಾಮಲಿನ ಉಪಟಳವೋ.

ಅಧಿಕಾರಿಯ ಕಗ್ಗೂಲೆ ,
ಸಾಹಿತಿಗೆ ಗುಂಡೇಟು ,
ಸಾವಿನಲ್ಲೂ ವಿಜ್ರಂಬಿಸುವ
ನಪುಂಸಕರ ತಿಕ್ಕಲಾಟವೋ .

ಕೃಷ್ಣನ ರಮ್ಯತೆ
ಅಂಬರೀಷನ ಖಿನ್ನತೆ
ಡಿ.ಕೆ.ಶಿ ಕುಮಾರನ
ಲಂಚಕೊರತನವೋ

ಸ್ವಾಮಿಜಿಯೋ ,
ಅತ್ಯಾಚಾರಿಯೋ,
ಜಾತಿ ಜಾತಿ ಎನ್ನುವ
ಹರುಕಲು ಬುದ್ಧಿಯೋ ?

ರಾಜ್ಯದ ಮಗಳ
ಕಾವೇರಿ ಡೊಂಬರಾಟವೋ ,
ವಲಸಿಗರ
ಕನ್ನಡ ದ್ವೇಷಿ ಧೋರಣೆಯೋ.

ಇನ್ನೆಲ್ಲಿ ಅಖಂಡ ಕರ್ನಾಟಕದ
ನಮ್ಮಕನಸ್ಸು 
ಕನಸು ನನಸಾಗಲು
ಎಲ್ಲಿದೆ ನಿಮ್ಮ ಮನಸ್ಸು