ನಿನ್ನ ನೆನಪೊಂದಿದ್ದರೆ ಸಾಕು
ಕನಸೇ ನೀನೇಕೆ ಬರುವೆ
ನನ್ನ ಎದೆಯಲಿ
ದೀಪದ ಜ್ಯೋತಿಯ ಬೆಳಗಿಸಿ
ನನ್ನನ್ನು ಎಬ್ಬಿಸುತಿರುವೆ.
ಹಿಮದ ರಾಶಿಯ
ತೀರದ ಚಳಿಯಲ್ಲಿ
ನಿನ್ನ ಅಪ್ಪುಗೆಯ
ಆ ಒಂದು ಕ್ಷಣ ಸಾಕು.
ಸಮುದ್ರದ ಅಲೆಯ
ಹಿಡಿಯಲೆತ್ನಿಸಿ
ಕುಣಿದಾಡುವ ಆ ಕಾಲುಗಳ
ಸದ್ದೊಂದಿದ್ದರೆ ಸಾಕು.
ಹಕ್ಕಿಗಳ ನಾದಕ್ಕೆ
ಉಲ್ಲಸಿತಳಾಗಿ
ದ್ವನಿಗೂಡಿಸುವ ನಿನ್ನ
ಕಂಠ ಒಂದಿದ್ದರೆ ಸಾಕು.
ಹರಿಯುವ ನದಿಯಲಿ
ಮೊಗವನ್ನೊಡ್ಡಿ
ನನ್ನ ನಿನ್ನಲ್ಲಿಗೆ ಕರೆಯುವ
ಬೆರಳ ಸಂಜ್ಞೆಯೊಂದಿದ್ದರೆ ಸಾಕು
ನನ್ನ ಮನಸಿನಲಿ
ಏರಿಳಿತ ಕಂಡರೂ
ನಿನ್ನ ನೋಡಲು ಕಾಡುವ
ಆ ನಗುವೊಂದಿದ್ದರೆ ಸಾಕು
ನೀನಿಲ್ಲದ ಈ ಕಲ್ಪನೆ
ನನ್ನ ತುಳಿಯುತಿದೆ
ಆದರೂ ನನ್ನ ಕನಸಿಗೆ
ಬರುವ ನಿನ್ನ ನೆನಪೊಂದಿದ್ದರೆ ಸಾಕು
ನನ್ನ ಎದೆಯಲಿ
ದೀಪದ ಜ್ಯೋತಿಯ ಬೆಳಗಿಸಿ
ನನ್ನನ್ನು ಎಬ್ಬಿಸುತಿರುವೆ.
ಹಿಮದ ರಾಶಿಯ
ತೀರದ ಚಳಿಯಲ್ಲಿ
ನಿನ್ನ ಅಪ್ಪುಗೆಯ
ಆ ಒಂದು ಕ್ಷಣ ಸಾಕು.
ಸಮುದ್ರದ ಅಲೆಯ
ಹಿಡಿಯಲೆತ್ನಿಸಿ
ಕುಣಿದಾಡುವ ಆ ಕಾಲುಗಳ
ಸದ್ದೊಂದಿದ್ದರೆ ಸಾಕು.
ಹಕ್ಕಿಗಳ ನಾದಕ್ಕೆ
ಉಲ್ಲಸಿತಳಾಗಿ
ದ್ವನಿಗೂಡಿಸುವ ನಿನ್ನ
ಕಂಠ ಒಂದಿದ್ದರೆ ಸಾಕು.
ಹರಿಯುವ ನದಿಯಲಿ
ಮೊಗವನ್ನೊಡ್ಡಿ
ನನ್ನ ನಿನ್ನಲ್ಲಿಗೆ ಕರೆಯುವ
ಬೆರಳ ಸಂಜ್ಞೆಯೊಂದಿದ್ದರೆ ಸಾಕು
ನನ್ನ ಮನಸಿನಲಿ
ಏರಿಳಿತ ಕಂಡರೂ
ನಿನ್ನ ನೋಡಲು ಕಾಡುವ
ಆ ನಗುವೊಂದಿದ್ದರೆ ಸಾಕು
ನೀನಿಲ್ಲದ ಈ ಕಲ್ಪನೆ
ನನ್ನ ತುಳಿಯುತಿದೆ
ಆದರೂ ನನ್ನ ಕನಸಿಗೆ
ಬರುವ ನಿನ್ನ ನೆನಪೊಂದಿದ್ದರೆ ಸಾಕು