To Mrs SDM: ಬಣ್ಣಿಸಲಿ ಹ್ಯಾಂಗ ನಿನ್ನ
Well it may not be my best but the girl to whom I wrote many poems I must say happy valentines day.............ಬಣ್ಣಿಸಲಿ ಹ್ಯಾಂಗ
ನಿನ್ನ ಮೇಲಿನ ಪ್ರೀತಿಯ ಬಣ್ಣವ
ಉದ್ದಗಿನ ದೇಹವದು
ಇಲಿ ಗಾತ್ರದ ಕೂದಲಲಿ
ಪುಟ್ಟ ಪುಟ್ಟ ಹೆಜ್ಜೆಯ ಇಡುತ
ನನ್ನ ಹೃದಯವ ಕಬಳಿಸಿರುವ
ನಿನ್ನ ಸೊಬಗನು
ಬಣ್ಣಿಸಲಿ ಹ್ಯಾಂಗ
ನಗುವಿನ ಕ್ಷೀರ ಸಾಗರದಲ್ಲಿ
ಮಿಂದೆದ್ದು ಬರುತಿರಲು
ಕಣ್ಣುಗಳ ಪ್ರೀತಿಯಲಿ
ವಿಶ್ವವೇ ಬರಿಸಿರುವ
ನಿನ್ನ ಚೆಲುವನು
ಬಣ್ಣಿಸಲಿ ಹ್ಯಾಂಗ
ಕಾಮವಿಲ್ಲದ ಮನಸದು
ಮುಗ್ಧ ಕರುವಿನ ಬಿಂಬವದು
ಮುದ್ದಿಸಲು ಹತ್ತಿರ ಬರಲು
ದೂರಸರಿಯುತ್ತಿರುವ
ನಿನ್ನ ಕಮಲ ನಯನಗಳ
ಬಣ್ಣಿಸಲಿ ಹ್ಯಾಂಗ
ನೂರು ಸಾಲುಗಳ ಪಯಣವಿದು
ಮನದೊಡತಿಯ ಕವನವಿದು
ಸ್ವಾತಿ ಮುತ್ತಿನಂತೆ
ಹೃದಯ ಸಾಗರದಲಿ ಜನಿಸಿರುವ
ನಿನ್ನ ಮೂರುತಿಯ
ಬಣ್ಣಿಸಲಿ ಹ್ಯಾಂಗ
ನಿನ್ನ ಮೇಲಿನ ಪ್ರೀತಿಯ
ತಿಳಿಸಲಿ ಹ್ಯಾಂಗ