ಬೆಂಗಳೂರ ಹುಡುಗಿ
Sometimes silence becomes the language of love. For the dumb,deaf,blind people we can see their love in different form. Here is a romantic poem of a boy and a girl who is a deaf. Even though she is deaf she can read lip movement.The boy meets the girl for the first time in bus stand. To meet her he comes so early to catch the bus. Only smile in their face nothing else. This silence continues for a month. After months of silence the boy wants to break his silence. But the girl thinks if he says also she can’t hear those beautiful words. Before he tells his love to her, she want to make him clear that she is deaf and whether he wants to continue his love even after knowing this. The boy says love has no language. Love is the language of itself. Now onwards my life is yours. But don’t ask my eyes because I have been seeing my love in your eyes. Until the last breath in my life I want to see the same love in your eyes and I will give the same.ನೋಡುತಿಹೆನು ಬೆಂಗಳೂರ ಹುಡುಗಿ
ಬಿಳಿ ಬಣ್ಣದ ಹುಡುಗಿ ಕೆಂಪು ಕೆನ್ನೆಯ ಬೆಡಗಿ.
ಮಲ್ಲಿಗೆಯ ನಗು ಚೆಲ್ಲುತ್ತಾ
ಮೆಲ್ಲ ಮೆಲ್ಲನೆ ಬರುತಿಹೆ
ಕಾಣದಾದೇನು ಆ ಕೆಂದುಟಿಯ
ಬಳಿ ಬಂದು ಕುಳಿತಿಹೆ
ಹೃದಯ ಬಡಿತವು ಏರುತಿರಲು
ಪದಗಳಿಲ್ಲದೆ ಬರೆಯುತಿಹೆ
ಅವಳಂದದ ಮಾಲೆಯನು
ಮುತ್ತು ಹಾರದಲಿ ಜೋಡಿಸುತಿಹೇನು.
ಕೇಳಿದಳು ಆ ಬೆಡಗಿ
ಬರೆಯುತಿಹೆ ಏನೆಂದು ?
ಹೇಳದಾದೆನು ಬರೆಯುತಿಹೇನು
ಒಲುಮೆ ಪ್ರೆಮಗೀತೆಯನು .
ತಿಂಗಳುಗಳೇ ಕಳೆದಿಹುದು
ಬರಿ ನಗುವಿನಲ್ಲೇ ಸಮಯ ಕಳೆದಿಹೇನು.
ತಿಕ್ಷ್ನ ಕಣ್ಣುಗಳ ಮಿಲನವಾಗುತ್ತಿರಲು
ಕೇಳದಾದೆನು ಪ್ರೇಮ ಭೇಕ್ಷೆಯ ಅವಳೆದುರು.
ಅಂದು ಬಂದಿತು ಪ್ರೇಮಿಗಳ ದಿನವೊಂದು,
ಪ್ರೇಮ ಗೀತೆಯ ಹಾಡುವ ದಿನ ಅಂದು .
ಹಾಡಬೇಕೆಂದು ಬಾಯ ತೆರೆಯುತಿಹೆ
ಕೈಯ ಮುಚ್ಚಿದಳು ಮೆಲ್ಲನೆ .
ನಿನ್ನ ಸೋಲು ನೋಡಲಾರೆ
ನನ್ನ ಪ್ರೀತಿಯ ತಿಳಿಸಲಾರೆ
ಮೌನ ಎಂಬ ಭಾಷೆಯು ಹೇಳಿಹುದು
ನಿನ್ನ ಪ್ರೀತಿಯ ಆಳವ
ಕೆಳಲಾರೇನು ನಿನ್ನ ಪ್ರೇಮ ಪದಗಳ
ಕಿವಿಗಳೆರುಡು ನಿಷ್ಕ್ರಿಯವಾಗಿಹುದು
ಪ್ರೀತಿ ಒಂದೇ ನನ್ನುಸಿರು
ಬದುಕುವೆಯಾ ಈ ಅಬಲೆಯ ಜೊತೆ
ಪ್ರೀತಿಗೆ ಬಾಷೆ ಬೇಡ
ಕೇಳಲು ಪದಗಳೂ ಬೇಡ
ಪ್ರೀತಿಗೆ ಪ್ರೀತಿಯೇ ಭಾಷೆ
ನನ್ನ ಉಸಿರಾಗಿಸುವೆ ಗೆಳತಿ.
ನಮ್ಮ ಪ್ರೇಮಕೆ ಸಾಕ್ಷಿಯೆಂದು
ಮಳೆಹನಿಯು ಜಿನುಗುತಿಹುದು
ಮೋಡವೆಲ್ಲ ಅಕ್ಷತೆಯ ಹಾಕುತಿರಲು
ದೇವತೆಗಳೆಲ್ಲ ಬಂದಂತಿಹುದು
ನನ್ನ ಕಿವಿಗಳು ನಿನ್ನವುಗಳು
ನನ್ನ ಉಸೀರು ನಿನ್ನದಾಗಿದೆ
ಕೇಳದಿರು ಈ ಕಣ್ಣುಗಳ
ನೋಡಲಿ ಹೇಗೆ ನಿನ್ನ ಕಣ್ಣಲ್ಲಿರುವ ಪ್ರೀತಿಯ
ನೋಡುತಿಹೆನು ಬೆಂಗಳೂರ ಹುಡುಗಿ
ಬಿಳಿ ಬಣ್ಣದ ಹುಡುಗಿ ಕೆಂಪು ಕೆನ್ನೆಯ ಬೆಡಗಿ.
Has to further polish it